Sunday, July 15, 2012

ಬದುಕುವ ಕಲೆ

 ದಪ್ಪಾ... ನೋಡಿ ಮುತ್ತಿನ ಮಾತಿನಿಂದ ತುತ್ತಿನ ಚೀಲ ತುಂಬಿಸಿಕೊಳ್ಳುವ ಕರಾಮತ್ತು . ಇತ್ತೀಚೆಗೆ ನಾನು ಮೈಸೂರಿಂದ  ಸುಳ್ಯ ಕಡೆಗೆ ಸಾಗುತಿದ್ದಾಗ ಮಡಿಕೇರಿಯಲ್ಲಿ ಬಸ್ ಬದಲಿಸುವ ಸಂದರ್ಬ . ಬೋರ್ಡ್  ಓದಿದ ನಂತರವೂ ಪಕ್ಕದ ತಾತನಲ್ಲಿ confirmation test ಮಾಡಿದ ಪಲ ಇದು .ಗ್ರೀನ್ ಸಿಗ್ನಲ್  ಕೊಟ್ಟ ಅಜ್ಜ ನನ್ನ ಪಕ್ಕಕೆ ಕರೆದು ಶುರುವಿಟ್ಟು ಕೊಂಡ ನೋಡಿ ವರಾತ. ಯಾವುದೇ corporate trainer ನ್ನು  ಮೀರಿಸುವ ರೀತಿ ಮಾತಾಡಿದ ತಾತ ನಾನೊಬ್ಬ ಪದವೀದರ  ನಿರುದ್ಯೋಗಿ ಇಂಜಿನಿಯರ್ ಎಂಬುದನ್ನು ತಿಳಿಯುತ್ತಲೇ ಕನ್ನಡ ದಿಂದ ಇಂಗ್ಲೀಷ್ಗೆ ತನ್ನ ಪ್ರವಾರ ವನ್ನು ಶಿಫ್ಟ್ ಮಾಡಿದ .ತನ್ನ ಜೀವನದ ವೈಬೋಗ , ಸಾದನೆ , ಸಾಹಸಗಳನ್ನೂ ಸಂಕ್ಷಿಪ್ತ ವಾಗಿ ತೆರೆದಿಟ್ಟು , ದುರಂತ ಕಥೆಯನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟ . ನಾನು ಸುಬ್ರಹ್ಮಣ್ಯದವನು ಎಂದು ತಿಳಿಯುತ್ತಲೇ ಸುಬ್ರಹ್ಮಣ್ಯ ದರ್ಮಸ್ಥಳದ ಗುಣಗಾನ ನಡೆಯಿತು. ಜೊತೇಗೆ ನನಗೆ ಕೆಲಸ ಕೊಡಿಸುವ ಹೆಚ್ಚುವರಿ ಜವಾದ್ಬರಿ ಯನ್ನು ಆ ಸುಬ್ರಹ್ಮಣ್ಯ ಮತ್ತು ಮಂಜುನಾಥನಿಗೆ ಹೊರಿಸಲಾಯಿತು. 
 ಕೊನೆಗೆ  'Loveless life is like a  gas less soda' ಎಂಬ ಮಾರ್ಮಿಕ ಉಪಾಂತ್ಯ ಕೂಡ ಕೊಡಲಾಯಿತು . ತದನಂತರ ಈ ನುಡಿಯನ್ನು ನಿರೂಪಿಸಲು ನನ್ನಲ್ಲಿ 50ರೂ demand ಮಾಡಲಾಯ್ತು . ಅದಕ್ಕೆ ಬೇಕಾಗಿ  ಆತನ ಹಳೆಯ    ಮಾತ್ರೆಯ raper ಗಳೆಲ್ಲವೂ ಸಾಕ್ಷಿ ನುಡಿಯಬೇಕಾಯ್ತು. ಕಡೆಗೆ ಚೌಕಾಶಿಯ ನಂತರ ಆತನ ಮಾತಿನ  ಮೋಡಿಗೆ ನಾನು ತೆತ್ತಿದು ನನ್ನ ಅಪ್ಪನ  30ರೊ. ಇಸ್ಟೆಲ್ಲಾ ರಾಮಾಯಣ ನಡೆದದ್ದು ಕೇವಲ 7 ನಿಮಿಷದಲ್ಲಿ. ಅಷ್ಟರಲ್ಲಿ ನನ್ನ ಬಸ್ ಹೊರಟಿತ್ತು. ಹಿಂತಿರುಗಿ ನೋಡಿದಾಗ ಇನ್ನೊಬ್ಬ ಮಿಕ ಮನ ಮಿಡಿಯುತಿದ್ದ . ಮುತ್ತಿನ ಮಾತು ತುತ್ತು ಹೊರೆಯುತಿತ್ತು...!!! 

1 comment: