ಜಂಜಡಗಳ ಮರೆತು ಬೆಳದಿಂಗಳ ಬೆಳಕಲ್ಲಿ ತಾರೆಗಳ ಎಣಿಸಲು Whats App ಎಂಬ ದೂಮಕೇತುವೊಂದು ತಾಲೆ ತಪ್ಪಿಸಿದೆ...
Emoji'ಸ್ ಗೋಜಲಲ್ಲಿ ಸಿಲುಕಿದ ಮನಸ್ಸೀಗ ಇರುವೆ ಮುತ್ತಿದ ಇದ್ದಿಲ ಪೊಟ್ಟಣ...
ಚಂದನೆಯ DPಯ ಆಚೆಗಿಹುದು, ಬಯಕೆಗಳ heatಗೆ ಕರಗಿ ಸೊರಗಿದ ಬಣ್ಣವಿಲ್ಲದ ಕಾರಿಡಾರು...
ಯೋಚಿಸಿ ಕೂತಾಗ ದೂರದ ಬೀದಿ ದೀಪ ಘಕ್ಕನೇ ಬೆಳಗಲು... ಬೆಸ್ಕಾಂಗೆ ಧನ್ಯವಾದವಿತ್ತು,
ಭಾವನೆಗಳ ಮೂಟೆ ಕಟ್ಟಿ... TVಯಾಳಕ್ಕಿಳಿಯಲು... ನನ್ನ ನಾ ಮರೆತೇ....