Saturday, December 26, 2015

ಇಪ್ಪತೈದರ ಇರುವೇ ಕಡಿತ



ವತ್ತು ತಡ ರಾತ್ರಿ ಅದ್ಯಾವುದೊ ಬುಕ್ ಓದ್ತ  ಕುಂತಿದ್ದೆ. Whatsapp ನ ಅನಾಮಿಕ ನಂಬರೊಂದು ನನ್ನ ಹುಟ್ಟುಹಬ್ಬದ ಶುಬಾಶಯ ಹೊತ್ತು ತಂದಿತ್ತು. ತಡವಾಗಿದ್ದಕ್ಕೆ ಕ್ಷಮೆ ಕೋರಿಕೆಯು ಜೊತೆಗಿತ್ತು. ನನ್ನ ಬರ್ತ್ ಡೇ ಕಳೆದು ಅದಾಗಲೇ ಎರಡು ದಿನವಾಗಿತ್ತು. ಸಮಯ ದಂಡಿ ಯಗಿದ್ದುದರಿಂದ... ಓದ್ತಾ ಇದ್ದ Mario Puzo ನ The Godfather ಬದಿಗಿಟ್ಟು ಹಂಗೇ ಯೋಚನಾ ಸಂತೆಗೆ ಜಾರಿದೆ.

ಅದು ನನ್ನ ಇಪ್ಪತೈದನೇ ವರ್ಷದ ಜನುಮ ದಿನವಾಗಿತ್ತು. ಎರಡು ಮೂರು ವರ್ಷ ಗಳ ಹಿಂದೆ ಕಾಲೇಜ್ ಜೀವನದಲ್ಲಿ ಕನಸಿನಂತೆ ಕಳೆಗಟ್ಟು ತಿದ್ದ ಈ ದಿನಾ ಇಪ್ಪತೈದನೆ ವರ್ಷಕ್ಕೆ ಬನದಾಗ ಸಪ್ಪೆ ಸಪ್ಪೆಯಾಗಿ ಫ್ಲೈಟ್ ಲ್ಲಿ ಸಿಗೋ onboard ಟೀ ಅಂತಾಗಿತ್ತು. ಹಿಂದೆ ಸುಳ್ಯ ದಲ್ಲಿದ್ದಾಗ ಹಿಂಡು ಸ್ನೇಹಿತರ ದಂಡಿನೊಡನೆ ಉನ್ಮಾದರಾಗಿ  ಆಚರಿಸುತ್ತಿದ್ದ ಬರ್ತ್ ಡೇ  ಈ ಸಾರಿ ಚೆನ್ನೈ ನ ಹೊರವಲಯದ ಫ್ಯಾಕ್ಟರಿ ಒಂದರಲ್ಲಿ  ಕಸ್ಟಮರ್ ಆಫೀಸ್ ನಲ್ಲಿ ಆತನನ್ನು ಸಂಬಾಲಿಸೋದರಲ್ಲಿ ಕಳೆದೊಗಿತ್ತು. ಇಡಿ ದಿನದ ಎಡೆ ಬಿಡದ ಕಾರ್ಯ ಮುಗಿಸಿ ಟ್ಯಾಕ್ಸಿ ಏರಿ ಮೊಬೈಲ್ ನೋಡಿದಾಗ  ಎಲ್ಲರ ತರಹೇವಾರಿ ಶುಭಾಶಯ ನೋಡಿ ಒಳಗೊಳಗೇ ನಸು ನಕ್ಕಿದ್ದೆ. ಇದು ನನ್ನ ಕಥೆ ಮಾತ್ರವಲ್ಲ... ರಜತ ಮಹೋತ್ಸವ ಆಚರಿಸುತಿರುವ ಎಲ್ಲ ಹುಡುಗರ... ಬಹುಶ ಯುವಕರ ಮಾತ್ರ ಕಥೆಯಿದು. 

ನಮ್ಮ ಓರಗೆಯ ಕೆಲವು ಹುಡುಗಿರೆಲ್ಲಾ ಒಂದು ಹಡೆದು ಇನ್ನೊಂದರ ನಿರೀಕ್ಷೆಯಲ್ಲಿದ್ದರೆ ಹಲವರು ಕತ್ತು ಬಾಗಿಸಿ ಗಂಟು ಹಾಕಿಸಿಕೊಳ್ಲೊ ತವಕದಿ ತೇಲ್ತಾ ಇದ್ದಾರೆ. ನಾವು ಮಾತ್ರ ಇರೋ ಕಡೆ ಇರುವೆ ಕಡಿತ ಅಂತ ಇರದ ಸ್ವರ್ಗ ಅರಸೋ ಅಬ್ಬೇಪಾರಿಗಳು. ಅಂಬೇಗಾಲಿಡೋ ಇಂಜಿನಿಯರ್ಗಳಾದ ನಾವು ದುಡ್ಡಿರೋ ದೊಡ್ಡಪ್ಪಗಳಿಗೆ ಕಮ್ಮಿ ದುಡಿಯೋರಾದ್ರೆ... ಕಮ್ಮಿ ಇರೋ ಚಿಕ್ಕಪ್ಪಾನವರಿಗೆ ಜಾಸ್ತಿ ದುಡಿಮೆಯೋರು. ಕುಟುಂಬ ವರ್ಗಕಂತೂ ಸರ್ಕಾರಿ ಕೆಲಸಕ್ಕೆ ಸೇರದ ನತದೃಸ್ಟರು ನಾವು.  ಕಾಲೇಜು ಹುಡುಗಿರೆಲ್ಲ ನಮ್ಮಲ್ಲಿ ಸಹೋದರತೆಯನ್ನು ಕಂಡರೆ... ಪ್ರೈಮರಿ, highschool ಮಕ್ಕಳಿಗೆಲ್ಲ ನಾವು ಅಂಕಲ್ ಗಲಾಗಿದ್ದೇವೆ. ಈಗ ತಾನೇ ಸಂಸಾರದ ಕೆಸರಲ್ಲಿ ಸಿಳುಕಿರೋ ಸ್ನೇಹಿತರಿಗೆ ನಾವು ಸುಖ ಪುರುಷರಂತೆ ಕಂಡುಬಂದರೆ ... 35-45 ಗಳಿಗೆ ನಾವೇನು ಅರಿಯದ ಹುಡುಗರು. 50ರ ಮೇಲಿನವರಿಗೆ  ನಾವಿನ್ನು ಮಕ್ಕಳು.

ಅಬ್ಬರದ ಕನಸಿನ ದಿಬ್ಬಣ ದೊಂದಿಗೆ ಕಾಲೇಜ್ ಇಂದ ಹೊರಬಂದ ನಮಗೆ ವಾಸ್ತವ ಬಹಳ ಬೇಗ ಅರ್ಥ ವಾಗತೊಡಗಿದೆ. ನಮ್ಮ ಚರ್ಚೆಗಳಲ್ಲೀಗ ಕ್ರೀಡೆ , ಸಿನಿಮಾ, ಹುಡುಗಿ, ಬೆಡಗಿನಾಚೆ ಸಾಮಾಜಿಕ ಚಿಂತನೆಗಳು ಜಾಗ ಪಡೆದಿವೆ. ಅರ್ನಬ್ ಗೊಸಾಮಿಯ news hour ಕೂಡ ಇಷ್ಟ ವಾಗತೊಡಗಿದೆ... ಕಾಸು ಕೂಡಿದೋ ಗಂಬೀರ ಯೋಚನೆ ಬಂದರೂ ಕುಡಿಕೆ ಮಾತ್ರ ಖಾಲಿಯಾಗೆ ಉಳಿದಿದೆ. ಸ್ವಂತ ಉದ್ಯಮದ ಕನಸುಗಳು ಗರಿಗೆದರಿ ಪ್ರಯತ್ನಕ್ಕೂ ದೂಡುತಿವೆ. ಕೆಲವೊಂದು ಜವಾಬ್ದಾರಿ ಗಳು ಬೇಡ ಬೇಡವೆಂದರೂ ಹೆಗಲೆರುತಿವೆ. ಆಫೀಸ್ ಕಾರ್ಯಗಳು ನಮ್ಮನ್ನು ಅಗತ್ಯಕಿಂತ ಜಾಸ್ತಿ ಮಾಗಿಸುತಿವೆ. ಬಹುಶ ಮೆದುಳು ತನ್ನ RAM ನ್ನು ಗರಿಷ್ಟ ಮಟ್ಟದಲ್ಲಿ ಉಪಯೋಗಿಸತೊಡಗಿದೆ   ಅಂತ ಅನಿಸತೊಡಗಿದೆ. 

ಅದಾಗ್ಯೂ ಜಗತ್ತಿನಲಿ ಒಬ್ಬ ವ್ಯಕ್ತಿಗೆ ಸ್ವಾತಂತ್ರ್ಯ... ಅದರಲ್ಲೂ ಆರ್ಥಿಕ ಸ್ವಾವಲಂಬನೆ ನೀಡೋ ಸಂತೋಷ ಬಹುಶ ಬೇರೆ ಯಾವುದೇ ಅರ್ಥದಲ್ಲಿ ಸಿಗಲಾರದೇನೋ. study days ಲ್ಲಿ ಬಿದಿಕಾಸಿಗೂ ಮನೆಯಲ್ಲಿ ಅಂಗಲಾಚುತಿದ್ದ ನಮಗೇ ಸ್ವಂತ ದುಡಿಮೆ ಕೈ ಬಿಸಿಯೇರಿಸ ತೊಡಗಿದಾಗ ಪಂಜರವಿಲ್ಲದ ಜಂಗಮರಾದೆವು ನಾವು. ಆ ಗೋಲ್ಡನ್ ಡೇಸ್ ಇವತ್ತಿರದಿರಬಹುದು... ಆದರೇ ಹೆಚ್ಚಿನವರೆಲ್ಲ ಬೆಂಗಳೂರಲ್ಲೇ  ಇರೋದ್ರಿಂದ.. ವೀಕೆಂಡ್ಸ್ ಸೇರೋ ಕೂಡು ಕೂಟಗಳು.. ಬೈಕ್ ರೈಡ್ ಗಳು.. ಜೊತೆ ಸೇರಿಸೋ ಟ್ರಿಪ್ ಗಳು.. ಎಲ್ಲರೂ ಸೇರೋ ಇತರೆ ಸಂದರ್ಬಗಳಲ್ಲಿ  ನಿಜ ವಾಗ್ಳು ಆ ದಿನಗಳನ್ನು ಮೆಲೈಸುತದೆ. ಜೊತೆಗೆ ವಾಟ್ಸಪ್, ಫೇಸ್ಬುಕ್ ಗಳು ಎಂದೆಂದಿಗೂ ಎಲ್ಲರನ್ನು ಜೋತೆಯಾಗಿರಿಸಿವೆ. 

ಕನಸೆಂಬ  ಕುದುರೆ  ಏರಿ ಸ್ವರ್ಗ ಸದೃಶ ಊರಿಂದ ನರಕದಂತ ನಗರಕ್ಕೆ ಸೇರೊ ನಾವು... ಅಲ್ಲೂ ಸ್ವರ್ಗವಾಸಿಗಳು. ಉತ್ಕಟ ಸ್ವಾತಂತ್ರ್ಯ... ಗೆಳೆಯರ  ಬಳಗ... ಉದ್ಯೋಗ... ಸಂಪರ್ಕ... ಸವಲತ್ತು... ಹೀಗೆ ಬಯಸಿದ ಬಹಳಷ್ಟು ದೊರೆತಿರುವಾಗ... ಬಹುಶ  ನಮ್ಮ ಜೀವನದ  ಸುಂದರ ದಿನಗಳ ಉಚ್ರಾಯ ಸ್ತಿತಿ ಇರಬಹುದೇನೋ ಅಂದುಕೊಳ್ಳುತಲೇ.... ಯೋಚನಾ ಲಹರಿಯಿಂದ ಹೊರಬಂದು ಅದನ್ನು ಅಕ್ಷರ ರೂಪಕಿಳಿಸಿದಾಗ ಮದ್ಯ ರಾತ್ರಿ 2:30 ಆಗಿತ್ತು. ಇದು ನನ್ನೊಬ್ಬನ ಕಥೆ ಯಾಗಿರದೇ 25ರ  ಆಸುಪಾಸಿನ ನಮ್ಮೆಲ್ಲರ ಕಥೆ-ವ್ಯಥೆ ಯಾಗಿತ್ತು.