Monday, October 19, 2015

ಫೇಸ್ಬುಕ್ ಎಂಬ ಬಚ್ಚಲಲ್ಲಿ ಬೆತ್ತಲಾಗುತ್ತ....!

ಗತ್ತನ್ನು ಹಿಡಿಯಾಗಿಸಿದ ತಂತ್ರಾಂಶಗಳ ಸಾಲಲ್ಲಿ ಮೊದಲ ಪಂಕ್ತಿ ಸಾಮಾಜಿಕ ಜಾಲ ತಾಣಗಳದ್ದು . ಅವರೊಳಗಿನ ಸಾಮ್ರಟನೆ ಈ ಫೇಸ್ಬುಕ್ ... ತರ್ಜುಮೆ ಗೊಂಡ ಮುಖ ಪುಸ್ತಕ. ಅರ್ಥಾತ್...  ಆದುನಿಕ ಜಾತಕ... ಸ್ನೇಹಿತರ ತಾಣ.. ನಮ್ಮನ್ನ ನಾವು ಮಾರಿಕೋಳ್ಳೊ ಮಾರುಕಟ್ಟೆ.. ವೇದನೆ ನಿವೇದನೆಗಳೀಗೊಂದು ವೇದಿಕೆ.. ಇನ್ನು ಏನೇನೋ.. ಒಟ್ಟಿನಲ್ಲಿ ಇದಿಲ್ಲದ ಬದುಕಿನ ಕಲ್ಪನೇನೆ ಒಂದು ಊಹಿಸಲಸಾದ್ಯ ನಿರ್ವಾತ. 


ಹಂಗಂತ ನಾನೇನು ಹುಟ್ಟುತ್ತಲೇ ಪ್ರೊಫೈಲ್ ಕ್ರಿಯೇಟ್ ಮಾಡ್ಕೊಂಡು ಬಿದ್ದವನಲ್ಲ . ಪೀಯುಸೀ ನಲ್ಲಿ ನೋಟ್ ಬುಕ್ ಹಿಡೀವಾಗ್ಲು ಫೇಸ್ಬುಕ್ ನಂಗೆ ಪರಿಚಯವಿಲ್ಲದ ಅಪರಿಚಿತ. ಕಾಲೇಜ್ಗೆ ಅಡಿಯಿಡುತಿದ್ದಂತೆ  ಹೊಸ ಹುಡುಗೀರ ಜೋತೆಗೆ ನಮ್ಮನ್ನು ತೀರಾ ಸೆಳೆದ ಇನ್ನೊಂದು ವಿಷಯವೆಂದರೆ ಇಂತಹ ಸೋಶಿಯಲ್ ನೆಟ್ವರ್ಕ್ಸ್.  ನಮ್ಮಲ್ಲಿ ಹಲವು ಜನರ ಡೆಬ್ಯೂ ಆಗಿದ್ದು ಆರ್ಕುಟಲ್ಲಿ... ಅದೂ ಹ್ರಿತಿಕ್ ರೋಶನ್ ಪ್ರೊಫೈಲ್ ಪಿಕ್ ಮೂಲಕವೆ. VGA  ಕ್ಯಾಮೆರಾದಲ್ಲಿ ತೆಗಿತಿದ್ದ ನಮ್ಮ ಫೋಟೋಗಳು ನಮ್ಗೆ ನೋಡೋಕಾಗ್ತಿರ್ಲಿಲ್ಲ. ಹಾಗಾಗಿ ಲಾಬ ಹೃತಿಕ್ ಗೆ (ಸೆಲ್ಫಿ ಜಮಾನದಲ್ಲಿ ನಮ್ಮ ಪ್ರೊಫೈಲ್ ನೋಡಿದ್ರೆ ಸ್ವತಃ ಬಾಲಿವುಡ್ ಮಂದಿಯೇ ಬೆರಗಾಗ್ತಾರೆ ಬಿಡಿ).   ಕೆಲವೇ ದಿನಗಳಲ್ಲಿ ಸುನಾಮಿಯಂತೆ ಬಂದೆರಗಿದ ಜುಕರ್ ಬರ್ಗ್ ನ ಫೇಸ್ಬುಕ್ ಎಂಬ ಬ್ರಹ್ಮಾಸ್ತ್ರ ಆರ್ಕುಟ್ ನ ಬುಡವನ್ನೇ ಅಲ್ಲಾಡಿಸಿ ಬಿಡ್ತು. ಕಳೆದ ವರ್ಷ ಆರ್ಕುಟ್ ತನ್ನ ಬಾಗಿಲು ಮುಚ್ಚಿದಾಗ ನಮ್ಮ ಪುರಾತನ ಫೋಟೋ ಗಳನ್ನು ನೋಡುತ್ತಾ ಕಾಲ ಹಿಂದೆ ಸರಿದಂತಾಗಿ ಬಾವುಕ ಶ್ರದ್ದಾಂಜಲಿ ಅರ್ಪಿಸಿದೆವು. ಆ ಮೂಲಕ ಫೇಸ್ಬುಕ್ ಗೆ ಕಂಪ್ಲೀಟ್ ಶರಣಾದೆವು. 

ಇವತ್ತಂತೂ ಫೇಸ್ಬುಕ್  ನಮ್ಮ ಜೀವನದ ಅವಿಬಾಜ್ಯ ಭಾಗವಾಗಿದೆ. ಯಾರೂ ಮೂಸದ ನಮ್ಮ ಕತೆ, ಕವಿತೆ, ಪ್ರತಿಬೆ ಗಳಿಗೆ ಪುಕ್ಕಟೆ ವೇದಿಕೆ ಯಾದರೆ... ತೆರೆಮರೆಯ ಸಾಹಸವ ಜಗಕ್ಕೆ ತಿಳಿಸುವ ಡಿಜಿಟಲ್ ಹೋರ್ಡಿಂಗ್ ಇದು. ಆಫೀಸ್ಗೆ ಬಂದ  ಹೊಸ ಹುಡುಗಿಯ ಇತಿಹಾಸ ತಿಳಿಯಲು ಇದು ಕೈಪಿಡಿ ಯಾದರೆ ಮದುವೆ ಪ್ರೊಪೋಸಲ್ ತರೋ ಹುಡುಗನ ಜನ್ಮ ಕುಂಡಲಿ ಇದು. ಕ್ಯಾಮೆರಾ ಹಿಡಿದ ಮಂಗಗಳನೆಲ್ಲ ಛಾಯಾಗ್ರಹಕ ರನ್ನಾಗಿಸಿದರೆ...  ಗಾಗಲ್ ದರಿಸಿದ ದರಿದ್ರರನ್ನೆಲ್ಲ ಸ್ಟಾರ್ ಮಾಡಿದ ಮಾಯಾವಿ ಜಾಲವಿದು. ಎಲ್ಲವನ್ನೂ... ಎಲ್ಲರನ್ನೂ... ತೆರೆದಿಡುತ್ತಾ ಉಟ್ಟ ಬಟ್ಟೆಯಲ್ಲೇ ಬೆತ್ತಲಾಗಿಸಿದ  ಅಗೋಚರ  ಬಚ್ಚಲು ಮನೆಯಿದು. 

ಅದಾಗ್ಯೂ ಯುವ ಜನತೆಯ ನರ ನಾಡಿಯಾಗಿರುವ ಈ ಸಾಮಾಜಿಕ ತಾಣ ಗಳು ಈ ಶತಮಾನ ದಲಿ ಸಾಮಾನ್ಯನಿಗೆ ಸಿಕ್ಕ ಬಹುದೊಡ್ಡ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ . ತನ್ನ ಮೂಗಿನ ನೇರಕ್ಕೆ ಯೋಚಿಸಿ ಸೊಂಟದ ಕೆಳಕ್ಕೆ ಕಾರ್ಯ ನಿರ್ವಹಿಸೋ ಸಾಂಪ್ರದಾಯಿಕ ಮೀಡಿಯಾಕ್ಕೆ ಟಾಂಗ್ ಕೊಡಬಹುದಾದ ಆಮ್ ಆದ್ಮಿ ಮಾದ್ಯಮ ಇದು.   ಆಳೋ ದೊರೆಗಳಿಗೆ ಜನ ಮಾನಸದ ಸಿಟ್ಟು ಸೆಡವು ಗಳನ್ನು ತಲುಪಿಸೋ ಸಾದನ ಇದು. ವ್ಯವಸ್ತೆ ಯೆಡೆಗೆ ಜನಸಾಮಾನ್ಯ ನಿಗಿರೋ ರೇಜಿಗೆ ಯನ್ನ ದಾಖಲಿಸೋ ಪಲಕವಿದು. 
ಕವಿಯೊಬ್ಬ ತನ್ನ ಕವಿತೆ ಬರೆದರೇ .. ಕಂಪನಿಯೊಂದು ತನ್ನ ಸರಕನ್ನಿಟ್ಟಿರುತ್ತೆ  ಇಲ್ಲಿ. ನಾಯಕ ನೊಬ್ಬ ತನ್ನ ಕನಸನ್ನ ಹಂಚಿದರೆ .. ಸಂಘಟನೆ ಯೊಂದು ತನ್ನ ಸಿದ್ದಾಂತವನ್ನ ಹರಿಯಬಿಡುತ್ತದೆ. 

ಯಾರೂ.. ಯಾವುದಕ್ಕೂ.. ಯಾವಾಗಲೂ ಬಳಸಬಹುದಾದ ನವ ಮದ್ಯಮವೇ ಈ ನಮ್ಮ ಫೇಸ್ಬುಕ್. ಯಾರೇ ಆದರೂ ಇದರ ಧನಾತ್ಮಕ ಅಂಶಗಳನ್ನು ಮಾತ್ರ ಪರಿಗಣಿಸಿ ಉಪಯೋಗಿಸಿರೆಂದು ಮನದುಂಬಿ ಆಶಿಸುತ್ತಾ... ಈ ಲೇಖನದ ಸ್ನ್ಯಾಪ್ ತೆಗ್ದು ಫೇಸ್ಬುಕ್ ಗೆ ಪೋಸ್ಟ್ ಮಾಡಿ ಲೈಕ್ ಪಡೆಯೋ ಕಾತರದಿ... ಈ ಅಗೋಚರ ಬಚ್ಚಲಲ್ಲಿ ನಾನೂ ಅರಿಯದೇ ಬೆತ್ತಲಾದೆ...!
   ಇಂತಿ... 
ರೋಶನ್ ಚಾರ್ಮತ