Friday, July 27, 2012

ಸಾರ್ಥಕತೆ

ಒಂದೊಮ್ಮೆ ನಾನು ಮರುಜನ್ಮ ಪಡೆಯಲು...
ನೀಳ ಕೊಳದಲ್ಲಿ ನಳನಳಿಸುವ ನೈದಿಲೆಯ ದಳವಾಗುವೆ ನಾನು
ಬಳಲಿ ಬಂದ ಮರಿದುಂಬಿ ನನ್ನ ಕೊಮಲತೆಯಿಂದ ಸಂತೃಪ್ತಿಯ  ಜೇಂಕಾರ ಮೊಳಗಿಸಲು
ಎನ್ನ ಜನ್ಮ ಸಾರ್ಥಕಗೊಳ್ಳುವುದು.... ಸಂತೃಪ್ತಿಯಲ್ಲಿ !!!

ಒಂದೊಮ್ಮೆ ನಾನು ಮರುಹುಟ್ಟು  ಪಡೆಯಲು...
ಮಳೆ ಕಾಡಿನ ದಟ್ಟ ಕಾನನದ ಹೆಮ್ಮರವಾಗುವೇ ನಾನು
ಎನ್ನ ಪೊಟರೆಯಲ್ಲಿ ಜನ್ಮ ತಳೆದ ಪುಟ್ಟ ಮರಿಗುಬ್ಬಿ ಚಿಲಿಪಿಲಿಗುಟ್ಟಳು
ಎನ್ನ ಜನ್ಮ ಸಾರ್ಥಕಗೊಳ್ಳುವುದು.... ಸಂತೋಷದಲ್ಲಿ  !!!

ಒಂದೊಮ್ಮೆ ನಾನು ಹಿಂತಿರುಗಿ ಬರಲು...
ನಮ್ರ ಲೇಖಕನ ವಿನಮ್ರ ಲೇಖನಕ್ಕೆ ಲೇಖನಿಯಾಗುವೆ  ನಾನು 
ಬರಹದಿಂದ ಚಿಲುಮೆಯಾದ  ಚಂಚಲ  ಮನಸ್ಸು ಆನಂದದಿ  ನಲಿಯಲು 
ಎನ್ನ ಜನ್ಮ ಸಾರ್ಥಕಗೊಳ್ಳುವುದು.... ಅತ್ಯಾನಂದದಲ್ಲಿ  !!!

 ಒಂದೊಮ್ಮೆನಾನು  ಈ ಜನ್ಮವ ಮೀಟಳು...
ಮುಗ್ದ ಸ್ನೇಹದಾಹಿಯ ಪಾಲಿಗೆ ರಸಬರಿತ ಖನಿಯಾಗುವೆ ನಾನು 
ಖುಷಿಯಿಂದ ಮುಗುಳ್ನಕ್ಕ ಆತನ ಮನದ ಮೂಲೆಯಲ್ಲಿ ನನ್ನ ನೆನಪೊಂದು ಅಚ್ಚೊತ್ತಳು 
ಜನ್ಮ ಸಾರ್ಥಕವಾಗುವುದು ಎನ್ನ... ಸ್ತಿಗ್ದ ಸ್ನೇಹದಲ್ಲಿ  !!!








Wednesday, July 18, 2012

Dark night fantasy


Shit…. No more free messages. It already counted 100. Its early morning 3.30 AM & I just cursed TRAI. Slowly banquet covered my face.

Spicy thoughts begin to whirl.

µc, µp, c, matlab were looks like toxic syringes.  Pointer points but OOPs still says oooooops. It never stick to my cerebellum.
Wills smith murmur how to pursuit happiness, Simran says 'varanam ayiram',  Rajesh kanna whispers “Mere sapnon ki rani kab aayegi tu…….  Aayi rut mastaani kab aayegi tu……….”.

Suddenly her curly hair on forehead leads my flash back. It remembers twilight saga.

I waked my already slept PC.  She was not there in FB chat box. Unknowingly I dialed her number.  My bad luck she was busy talking with someone at this 3.45 AM. My laptop already went to deep sleep even though my tears wetting its keyboard.

I was sure this dream would be a best PJ matter.  Hope you don’t understand anything. Don’t even try that.

I will try to convince else I will confuse.

This is nothing but Dark night fantasy.

Sunday, July 15, 2012

ಬದುಕುವ ಕಲೆ

 ದಪ್ಪಾ... ನೋಡಿ ಮುತ್ತಿನ ಮಾತಿನಿಂದ ತುತ್ತಿನ ಚೀಲ ತುಂಬಿಸಿಕೊಳ್ಳುವ ಕರಾಮತ್ತು . ಇತ್ತೀಚೆಗೆ ನಾನು ಮೈಸೂರಿಂದ  ಸುಳ್ಯ ಕಡೆಗೆ ಸಾಗುತಿದ್ದಾಗ ಮಡಿಕೇರಿಯಲ್ಲಿ ಬಸ್ ಬದಲಿಸುವ ಸಂದರ್ಬ . ಬೋರ್ಡ್  ಓದಿದ ನಂತರವೂ ಪಕ್ಕದ ತಾತನಲ್ಲಿ confirmation test ಮಾಡಿದ ಪಲ ಇದು .ಗ್ರೀನ್ ಸಿಗ್ನಲ್  ಕೊಟ್ಟ ಅಜ್ಜ ನನ್ನ ಪಕ್ಕಕೆ ಕರೆದು ಶುರುವಿಟ್ಟು ಕೊಂಡ ನೋಡಿ ವರಾತ. ಯಾವುದೇ corporate trainer ನ್ನು  ಮೀರಿಸುವ ರೀತಿ ಮಾತಾಡಿದ ತಾತ ನಾನೊಬ್ಬ ಪದವೀದರ  ನಿರುದ್ಯೋಗಿ ಇಂಜಿನಿಯರ್ ಎಂಬುದನ್ನು ತಿಳಿಯುತ್ತಲೇ ಕನ್ನಡ ದಿಂದ ಇಂಗ್ಲೀಷ್ಗೆ ತನ್ನ ಪ್ರವಾರ ವನ್ನು ಶಿಫ್ಟ್ ಮಾಡಿದ .ತನ್ನ ಜೀವನದ ವೈಬೋಗ , ಸಾದನೆ , ಸಾಹಸಗಳನ್ನೂ ಸಂಕ್ಷಿಪ್ತ ವಾಗಿ ತೆರೆದಿಟ್ಟು , ದುರಂತ ಕಥೆಯನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟ . ನಾನು ಸುಬ್ರಹ್ಮಣ್ಯದವನು ಎಂದು ತಿಳಿಯುತ್ತಲೇ ಸುಬ್ರಹ್ಮಣ್ಯ ದರ್ಮಸ್ಥಳದ ಗುಣಗಾನ ನಡೆಯಿತು. ಜೊತೇಗೆ ನನಗೆ ಕೆಲಸ ಕೊಡಿಸುವ ಹೆಚ್ಚುವರಿ ಜವಾದ್ಬರಿ ಯನ್ನು ಆ ಸುಬ್ರಹ್ಮಣ್ಯ ಮತ್ತು ಮಂಜುನಾಥನಿಗೆ ಹೊರಿಸಲಾಯಿತು. 
 ಕೊನೆಗೆ  'Loveless life is like a  gas less soda' ಎಂಬ ಮಾರ್ಮಿಕ ಉಪಾಂತ್ಯ ಕೂಡ ಕೊಡಲಾಯಿತು . ತದನಂತರ ಈ ನುಡಿಯನ್ನು ನಿರೂಪಿಸಲು ನನ್ನಲ್ಲಿ 50ರೂ demand ಮಾಡಲಾಯ್ತು . ಅದಕ್ಕೆ ಬೇಕಾಗಿ  ಆತನ ಹಳೆಯ    ಮಾತ್ರೆಯ raper ಗಳೆಲ್ಲವೂ ಸಾಕ್ಷಿ ನುಡಿಯಬೇಕಾಯ್ತು. ಕಡೆಗೆ ಚೌಕಾಶಿಯ ನಂತರ ಆತನ ಮಾತಿನ  ಮೋಡಿಗೆ ನಾನು ತೆತ್ತಿದು ನನ್ನ ಅಪ್ಪನ  30ರೊ. ಇಸ್ಟೆಲ್ಲಾ ರಾಮಾಯಣ ನಡೆದದ್ದು ಕೇವಲ 7 ನಿಮಿಷದಲ್ಲಿ. ಅಷ್ಟರಲ್ಲಿ ನನ್ನ ಬಸ್ ಹೊರಟಿತ್ತು. ಹಿಂತಿರುಗಿ ನೋಡಿದಾಗ ಇನ್ನೊಬ್ಬ ಮಿಕ ಮನ ಮಿಡಿಯುತಿದ್ದ . ಮುತ್ತಿನ ಮಾತು ತುತ್ತು ಹೊರೆಯುತಿತ್ತು...!!! 
"Surprises & Sudden happenings adds spiciness to our life. These things just converts plain rice life to pride rice". Think & feel the change. When we expect the result, we will be happy if we get it. But if we don't expect we will be excited when we achieve it.