Thursday, June 23, 2016

ಆದುನಿಕ ಗೀಜಗ

ನಿಂತ ಸಾಗರದ ಮದ್ಯೇ ಚಲಿಸಿದ  ಚಿಲುಮೆಯ ಅಲೆಗಳು!
ಇಳಿಸಂಜೆಯಲಿ ಇಣುಕಿದ ನೇಸರನ ಕಂಡು ಗಾನ ಗುನುಗುತಿರಲು!
ಈ ಅದ್ಬುತ ಇಳೆಯ ಸೌoದರ್ಯಾದ ಸೆರಗನ್ನು ಒಂದಿಂಚೂ ಆಸ್ವಾದಿಸಲಾರದಾದ!
ಗಾಗಲ್ಸ್ ದರಿಸಿ ಗೂಗಲ್ ಪರ್ಯಟನೆಗೆ ಹೊರಟ ಈ ಆದುನಿಕ ಗೀಜಗ...! 
  

ಬ್ಯಾಂಗಲೋರ್ ಟ್ರಾಫಿಕ್ ರಸಗವಳ



ನೀವು  ಯಾರಾದರೂ ಬೆಂಗಳೂರಿಗರನ್ನು ಬೇಟಿ ಮಾಡಿದರೆ... ಹೆಚ್ಚಿನ  ಸಂದರ್ಬಗಳಲ್ಲಿ ಮೊದಲನೇ ಮಾತು ಬೆಂಗಳೂರಿನ ಟ್ರಾಫಿಕ್ ಬಗೆಗಿನ ಸ್ತುತಿ ಗಾನ ವಾಗಿರುತದೆ... ಇಡಿ ದಿನದ ಬಳಲಿಕೆಗೆ ಬಾಡಿದ body.. ಕೇಳದ ಗಾಡಿ, ಆ  ಮಾಲಿನ್ಯ.. ಕೆಲಸದ ಒತ್ತಡ... ಜೊತೆಗೆ ನೆತ್ತಿ ಸುಡೋ ರಣಬಿಸಿಲು.... ಒಂಥರಾ ಈ ಸ್ವರ್ಗ ನಗರಿಯಾ ನರಕದ ಟ್ರೈಲರ್ ಅನುಬವ... ಅದೇನೇ ಇದ್ದರು... ಹೊಲಸಲ್ಲು ಹಲಸು ಬೆಳೆವಂತೆ... ಈ ತಾಜಾ ಟ್ರಾಫಿಕ್ ಜಾಮ್ ನಲ್ಲೂ ಒಂತರ ಮಜಾವಿರುತ್ತೆ....

C V RAMAN ನಗರದಿಂದ ಜಯನಗರದವರೆಗೂ ಹತ್ತಿರ ಹತ್ತಿರ ದಿನಕ್ಕೆ 35 KM UP & Down... ಮತ್ತೆ ಆಫೀಸ್ ಕೆಲಸದ ನಿಮಿತ್ತ  ಇನ್ನೊಂದಿಸ್ಟು ಸವಾರಿ ಮಾಡೋ ನಾನು ಈ ಟ್ರಾಫಿಕ್ ಆನಂದ ರಸಗವಳವನ್ನು ಎಲ್ಲರ ಮುಂದಿಡಬೇಕಾಗಿದೆ.

ಬೆಂಗಳೂರೀನ ರಿಂಗ್ ರೋಡಲ್ಲಿ... ಅದರಲ್ಲೂ ಬನಶಂಕರಿಯಿಂದ Tinfactory ಮದ್ಯೆ ಸಿಗೋ  BTM, Silkboard, ಮಾರತಹಳ್ಳಿ, ಟಿನ್ ಫ್ಯಾಕ್ಟರಿ ಸಿಗ್ನಲ್ ಗಳ ಅಂದ ಚೆಂದ ಬಣ್ಣಿಸಲು ನಾನೊಬ್ಬನೇ ಸಾಲದು. ಇನ್ನು ಪೀಕ್ ಹವರ್ನಲ್ಲಿ... ವೈಟ್ ಫೀಲ್ಡ್ ಇಂದ ಮೆಜೆಸ್ಟಿಕ್ ತಲುಪೋ ಮೊದಲು E-City ಇಂದ ಚೆನ್ನೈ ತಲುಪಬಹುದು... ಜೊತೆಗೆ ಗೊರಗುಂಟೆ ಪಾಳ್ಯ ಮತ್ತು ಇನ್ನಿತರ ಸಿಟಿ ಒಳಗಿನ ಸಿಗ್ನಲ್ ಗಳನ್ನು ಮರೆತರೆ ಪಾಪ ತಟ್ಟೋದು ಖಂಡಿತ...

ಆದರೂ ಸಿಗ್ನಲ್ ಬಿದ್ದಾಗ  ಸ್ತಬ್ದವಾಗೊ ಆ ಅರ್ಧ ನಿಮಿಷದ ಹಲವಾರು ಸ್ವಾರಸ್ಯಗಳ ಆಗರ. ಹಡೆಯದ ಶಿಶುವ ಹಿಡಿದು ರೂಪಾಯಿ ಬೇಡೋ ಮಹಾ ತಾಯಂದಿರು... 10 ರೂಪಾಯಿ ಕೇಳೋ ಮಾಮನವರು... 100 ರೂಪಾಯಿ  ಕೀಳೋ ಮರ್ಯಾದಸ್ತ ಪೊಲೀಸ್ ಮಾಮಂದಿರ ಜೊತೆಗೆ ಥರಗುಟ್ಟಿಸೊ ಬಾಸುಗಳ ಅರಚಾಟ, ಆಟೋ ಟ್ಯಾಕ್ಸಿ ಡ್ರೈವರ್ ಗಳ ಸಂಸ್ಕೃತ ಪ್ರವಚನ, ಹೆಲ್ಮೆಟ್ ಮಗ್ಗುಲಿಗೇ ಮುತ್ತಿಡೋ ಪ್ರಿಯತಮೆಯರು... ಇವೆಲ್ಲವನ್ನ ಬೆರಗು ಕಣ್ಣಲ್ಲಿ ನೋಡಿ ಆನಂದಿಸೋ ನಮ್ಮಂತಹ ಚಿಂತೆ ಇಲ್ಲದ ಸಂತರು.... ಒಟ್ಟಿನಲ್ಲಿ ಇದು ನಿಜಕ್ಕೊ ಒಂಥರ ಕೆಸರಲ್ಲಿ ಕಮಲ ಕಂಡಂತೆ.  

ಏನೇ ಆಗಲಿ... ನನ್ನಂತವರಿಗೆ ತಲೆ  ಬುಡ ಇಲ್ಲದ ಯೋಚನೆ  ಮಾಡೋಕ್ಕೆ...  ಇಂತಹ ಡಬ್ಬಾ  ಲೇಖನಕ್ಕೆ ಲೇಖನಿ ಹಿಡಿಯಲು  ಒಂದು  ಉತ್ತಮ ವಿಷಯವಾಗಿದು ಮಾತ್ರ ಅರೆ ನಗ್ನ ಸತ್ಯ. ಭವ್ಯ ಬೆಂಗಳೂರಿನ  ಟ್ರಾಫಿಕ್  ಮಾತ್ರ ನಿಮ್ಮ ಸಮಯವನ್ನು ಕಸಿಯೋದಲ್ಲ... ಅದರ ಬಗೆಗಿನ ಇಂತಹ ಬರಹಗಳು ಕೂಡ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಗೊಳಿಸುತಿರೋದು ಮಾತ್ರ ಕುಚೋದ್ಯವೇ   ಸರಿ.  So stop here... take a shortcut.. n avoid SIGNAL...