Monday, October 19, 2015

ಫೇಸ್ಬುಕ್ ಎಂಬ ಬಚ್ಚಲಲ್ಲಿ ಬೆತ್ತಲಾಗುತ್ತ....!

ಜಗತ್ತನ್ನು ಹಿಡಿಯಾಗಿಸಿದ ತಂತ್ರಾಂಶಗಳ ಸಾಲಲ್ಲಿ ಮೊದಲ ಪಂಕ್ತಿ ಸಾಮಾಜಿಕ ಜಾಲ ತಾಣಗಳದ್ದು . ಅವರೊಳಗಿನ ಸಾಮ್ರಟನೆ ಈ ಫೇಸ್ಬುಕ್ ... ತರ್ಜುಮೆ ಗೊಂಡ ಮುಖ ಪುಸ್ತಕ. ಅರ್ಥಾತ್...  ಆದುನಿಕ ಜಾತಕ... ಸ್ನೇಹಿತರ ತಾಣ.. ನಮ್ಮನ್ನ ನಾವು ಮಾರಿಕೋಳ್ಳೊ ಮಾರುಕಟ್ಟೆ.. ವೇದನೆ ನಿವೇದನೆಗಳೀಗೊಂದು ವೇದಿಕೆ.. ಇನ್ನು ಏನೇನೋ.. ಒಟ್ಟಿನಲ್ಲಿ ಇದಿಲ್ಲದ ಬದುಕಿನ ಕಲ್ಪನೇನೆ ಒಂದು ಊಹಿಸಲಸಾದ್ಯ ನಿರ್ವಾತ. 


ಹಂಗಂತ ನಾನೇನು ಹುಟ್ಟುತ್ತಲೇ ಪ್ರೊಫೈಲ್ ಕ್ರಿಯೇಟ್ ಮಾಡ್ಕೊಂಡು ಬಿದ್ದವನಲ್ಲ . ಪೀಯುಸೀ ನಲ್ಲಿ ನೋಟ್ ಬುಕ್ ಹಿಡೀವಾಗ್ಲು ಫೇಸ್ಬುಕ್ ನಂಗೆ ಪರಿಚಯವಿಲ್ಲದ ಅಪರಿಚಿತ. ಕಾಲೇಜ್ಗೆ ಅಡಿಯಿಡುತಿದ್ದಂತೆ  ಹೊಸ ಹುಡುಗೀರ ಜೋತೆಗೆ ನಮ್ಮನ್ನು ತೀರಾ ಸೆಳೆದ ಇನ್ನೊಂದು ವಿಷಯವೆಂದರೆ ಇಂತಹ ಸೋಶಿಯಲ್ ನೆಟ್ವರ್ಕ್ಸ್.  ನಮ್ಮಲ್ಲಿ ಹಲವು ಜನರ ಡೆಬ್ಯೂ ಆಗಿದ್ದು ಆರ್ಕುಟಲ್ಲಿ... ಅದೂ ಹ್ರಿತಿಕ್ ರೋಶನ್ ಪ್ರೊಫೈಲ್ ಪಿಕ್ ಮೂಲಕವೆ. VGA  ಕ್ಯಾಮೆರಾದಲ್ಲಿ ತೆಗಿತಿದ್ದ ನಮ್ಮ ಫೋಟೋಗಳು ನಮ್ಗೆ ನೋಡೋಕಾಗ್ತಿರ್ಲಿಲ್ಲ. ಹಾಗಾಗಿ ಲಾಬ ಹೃತಿಕ್ ಗೆ (ಸೆಲ್ಫಿ ಜಮಾನದಲ್ಲಿ ನಮ್ಮ ಪ್ರೊಫೈಲ್ ನೋಡಿದ್ರೆ ಸ್ವತಃ ಬಾಲಿವುಡ್ ಮಂದಿಯೇ ಬೆರಗಾಗ್ತಾರೆ ಬಿಡಿ).   ಕೆಲವೇ ದಿನಗಳಲ್ಲಿ ಸುನಾಮಿಯಂತೆ ಬಂದೆರಗಿದ ಜುಕರ್ ಬರ್ಗ್ ನ ಫೇಸ್ಬುಕ್ ಎಂಬ ಬ್ರಹ್ಮಾಸ್ತ್ರ ಆರ್ಕುಟ್ ನ ಬುಡವನ್ನೇ ಅಲ್ಲಾಡಿಸಿ ಬಿಡ್ತು. ಕಳೆದ ವರ್ಷ ಆರ್ಕುಟ್ ತನ್ನ ಬಾಗಿಲು ಮುಚ್ಚಿದಾಗ ನಮ್ಮ ಪುರಾತನ ಫೋಟೋ ಗಳನ್ನು ನೋಡುತ್ತಾ ಕಾಲ ಹಿಂದೆ ಸರಿದಂತಾಗಿ ಬಾವುಕ ಶ್ರದ್ದಾಂಜಲಿ ಅರ್ಪಿಸಿದೆವು. ಆ ಮೂಲಕ ಫೇಸ್ಬುಕ್ ಗೆ ಕಂಪ್ಲೀಟ್ ಶರಣಾದೆವು. 

ಇವತ್ತಂತೂ ಫೇಸ್ಬುಕ್  ನಮ್ಮ ಜೀವನದ ಅವಿಬಾಜ್ಯ ಭಾಗವಾಗಿದೆ. ಯಾರೂ ಮೂಸದ ನಮ್ಮ ಕತೆ, ಕವಿತೆ, ಪ್ರತಿಬೆ ಗಳಿಗೆ ಪುಕ್ಕಟೆ ವೇದಿಕೆ ಯಾದರೆ... ತೆರೆಮರೆಯ ಸಾಹಸವ ಜಗಕ್ಕೆ ತಿಳಿಸುವ ಡಿಜಿಟಲ್ ಹೋರ್ಡಿಂಗ್ ಇದು. ಆಫೀಸ್ಗೆ ಬಂದ  ಹೊಸ ಹುಡುಗಿಯ ಇತಿಹಾಸ ತಿಳಿಯಲು ಇದು ಕೈಪಿಡಿ ಯಾದರೆ ಮದುವೆ ಪ್ರೊಪೋಸಲ್ ತರೋ ಹುಡುಗನ ಜನ್ಮ ಕುಂಡಲಿ ಇದು. ಕ್ಯಾಮೆರಾ ಹಿಡಿದ ಮಂಗಗಳನೆಲ್ಲ ಛಾಯಾಗ್ರಹಕ ರನ್ನಾಗಿಸಿದರೆ...  ಗಾಗಲ್ ದರಿಸಿದ ದರಿದ್ರರನ್ನೆಲ್ಲ ಸ್ಟಾರ್ ಮಾಡಿದ ಮಾಯಾವಿ ಜಾಲವಿದು. ಎಲ್ಲವನ್ನೂ... ಎಲ್ಲರನ್ನೂ... ತೆರೆದಿಡುತ್ತಾ ಉಟ್ಟ ಬಟ್ಟೆಯಲ್ಲೇ ಬೆತ್ತಲಾಗಿಸಿದ  ಅಗೋಚರ  ಬಚ್ಚಲು ಮನೆಯಿದು. 

ಅದಾಗ್ಯೂ ಯುವ ಜನತೆಯ ನರ ನಾಡಿಯಾಗಿರುವ ಈ ಸಾಮಾಜಿಕ ತಾಣ ಗಳು ಈ ಶತಮಾನ ದಲಿ ಸಾಮಾನ್ಯನಿಗೆ ಸಿಕ್ಕ ಬಹುದೊಡ್ಡ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ . ತನ್ನ ಮೂಗಿನ ನೇರಕ್ಕೆ ಯೋಚಿಸಿ ಸೊಂಟದ ಕೆಳಕ್ಕೆ ಕಾರ್ಯ ನಿರ್ವಹಿಸೋ ಸಾಂಪ್ರದಾಯಿಕ ಮೀಡಿಯಾಕ್ಕೆ ಟಾಂಗ್ ಕೊಡಬಹುದಾದ ಆಮ್ ಆದ್ಮಿ ಮಾದ್ಯಮ ಇದು.   ಆಳೋ ದೊರೆಗಳಿಗೆ ಜನ ಮಾನಸದ ಸಿಟ್ಟು ಸೆಡವು ಗಳನ್ನು ತಲುಪಿಸೋ ಸಾದನ ಇದು. ವ್ಯವಸ್ತೆ ಯೆಡೆಗೆ ಜನಸಾಮಾನ್ಯ ನಿಗಿರೋ ರೇಜಿಗೆ ಯನ್ನ ದಾಖಲಿಸೋ ಪಲಕವಿದು. 
ಕವಿಯೊಬ್ಬ ತನ್ನ ಕವಿತೆ ಬರೆದರೇ .. ಕಂಪನಿಯೊಂದು ತನ್ನ ಸರಕನ್ನಿಟ್ಟಿರುತ್ತೆ  ಇಲ್ಲಿ. ನಾಯಕ ನೊಬ್ಬ ತನ್ನ ಕನಸನ್ನ ಹಂಚಿದರೆ .. ಸಂಘಟನೆ ಯೊಂದು ತನ್ನ ಸಿದ್ದಾಂತವನ್ನ ಹರಿಯಬಿಡುತ್ತದೆ. 

ಯಾರೂ.. ಯಾವುದಕ್ಕೂ.. ಯಾವಾಗಲೂ ಬಳಸಬಹುದಾದ ನವ ಮದ್ಯಮವೇ ಈ ನಮ್ಮ ಫೇಸ್ಬುಕ್. ಯಾರೇ ಆದರೂ ಇದರ ಧನಾತ್ಮಕ ಅಂಶಗಳನ್ನು ಮಾತ್ರ ಪರಿಗಣಿಸಿ ಉಪಯೋಗಿಸಿರೆಂದು ಮನದುಂಬಿ ಆಶಿಸುತ್ತಾ... ಈ ಲೇಖನದ ಸ್ನ್ಯಾಪ್ ತೆಗ್ದು ಫೇಸ್ಬುಕ್ ಗೆ ಪೋಸ್ಟ್ ಮಾಡಿ ಲೈಕ್ ಪಡೆಯೋ ಕಾತರದಿ... ಈ ಅಗೋಚರ ಬಚ್ಚಲಲ್ಲಿ ನಾನೂ ಅರಿಯದೇ ಬೆತ್ತಲಾದೆ...!
   ಇಂತಿ... 
ರೋಶನ್ ಚಾರ್ಮತ

Tuesday, August 4, 2015

ಬಾವನೆಗಳ Outsourcing : ಕಾದಿರುವೆನು.... ಕಾತರದಿ ... !





ತರುಣೀ .... ಕಳೆದು ಹೊಗಿರುವೆನು ನಾನು....!

ನಿನ್ನ ಕಣ್ಣ ನೋಟದ... ನಾಟ್ಯದಲಿ..!
ಮುಂಗುರುಳ... ಮಾಧುರ್ಯದಲಿ..!
ಕೇಶರಾಶಿಯ... ಕಸುವಿನಲಿ..!
ಮಧುರ ಮಾತಿನ... ಸೋಗಡಿನಲಿ..!
ಮೂರು ಮತ್ತೊಂದು ಅಡಿಯ... ಸೌಂದರ್ಯದಲಿ..!

ಹೇಳಿಬಿಡು.... ಇದು  ಪ್ರೀತಿಯ ... !!!
ಪರಿಶುದ್ದ  ಸ್ನೇಹವೇ... !!!
ಕಾದಿರುವೆನು.... ಕಾತರದಿ ... !

Feelings Outsourcing :#2



ಓ .... ಚಿನ್ನಾ... 

ಪುಟಿದೆಳುತಿದೆ... ಮೈ ಮನ...  ನಿನ್ನ ನೆನೆದಾಗ ... 
ತೋಚದಾಗಿದೆ... ಯಾಕೆಂದು... 
ಪವಡಿಸುತಿವೆ... ಪಾದಗಳು.. ನಿನ್ನ ಹೆಜ್ಜೆಗೆ ದನಿಯಾಗಳು ... 
ತಿಳಿಯದಾಗಿದೆ... ಯಾಕೆಂದು... 
ಮರುಳಾಗಿರುವೆ... ನಿನ್ನ  ಅರಲು ಮಾತಿಗೆ... 
ಯೋಚಿಸಿರುವೆ... ಯಾಕೆಂದು... 
ಬಯತಿರುವೆನು... ಜಗದ ಖುಷಿಯೆಲ್ಲ ನಿನಗೀಯಲು .. 
ಯಾಚಿಸಿರುವೆ... ಯಾಕೆಂದು... 

ಹವನಿಸುತಿರುವೆನು ಕಾತರದಿ......!
ಹೇಳಿಬಿಡು... ಇದು ಪ್ರೀತಿಯ.. ಬರಿ ಸ್ನೇಹಾನ!!!

Feelings Outsourcing :#1

ಸ್ನೇಹಿತರ ಬಾವನೆಗಳಿಗೆ ದರ್ಪಣವಾಗಿ  ....  ಅವರ ಪ್ರೇಮಕ್ಕೆ  ನನ್ನ ಪೆನ್ನು ದ್ವನಿಯಾದಾಗ ... 

ಹವನಿಸುತಿದೆ ಹಣತೆ.... ಹಂಬಲದಿಂದ... 
ನಿನ್ನ ಗುಳಿ ಕೆನ್ನೆಯ... ತಾಕಳು... 
ಮಿಡಿಯುತಿದೆ ಮನಸ್ಸು...  ಮಾದುರ್ಯದಿಂದ... 
ನಿನ್ನ ಮುಂಗುರುಳ... ಮುತ್ತಿಡಲು... 

ಆರಡಿ ಶಿಲೆಯಲ್ಲ... ಆವರಣದ ಕಲೆಯಲ್ಲ... 
ಆವರಿಸಿದೆ ಎಲ್ಲೆಲ್ಲೂ... ಕಾಡಿದೆ ಕನಸಲ್ಲೂ... 

ಬೆಳದಿಂಗಳಿಗೂ ಬೆರಗು... ಮೇಘಗಡನಕ್ಕೂ ಮುನಿಸು... 
ಮಾತಿನ ಮಲ್ಹಾರಕ್ಕೆ... ನಿನ್ನ  ಸ್ಥಿಗ್ದ ಸೌಂದರ್ಯಕ್ಕೆ...!
  

Happy Friendship Day





ರಕ್ತಹಂಚಿ... ಜನಿಸಲಿಲ್ಲ ನಾವು... 
ಕೂಳುಹಂಚಿ.. ಬೆಳೆಯಲು ಇಲ್ಲ... 

ಆದರೂ ಜೊತೆಗಾರರು ನಾವೆಲ್ಲ.. 
ಒಂದೇ ನೌಕೆಯ ನಾವಿಕರಾಗಿ.. 
ಬಾಳ ದಾರಿಯ ಪಯಣಿಗರಾಗಿ.. 

ಕಷ್ಟ-ನಷ್ಟಗಳಿಗೆ.... ಸಮಸ್ಯೆ-ಸರಮಾಲೆಗಳಿಗೆ... 
ಉಗಮವು ನಾವೇ... ಸುಗಮವು ನಾವೇ... 

ಆಪ್ತರಾಗಿ, ಸಹೋದರರಾಗಿ, ಪೋಷಕರಾಗಿ, ಹಿತೈಷಿಗಳಾಗಿ.... 
ನಲಿದೆವು ನಾವು... ಸಂಬ್ರಮಿಸುವೆವು ನಾವು... 
ಅಂದು ಇಂದು ಎಂದೆಂದಿಗೂ.... !

Monday, May 11, 2015

Corporate Naavika

ಭುವನ ಸುತ್ತಿ... ಭಾವನೆ ಸತ್ತು... ಒಸರುತ್ತಿದೆ ಏಕಾಂತ....
ಗಣಿತ .. ಗಣಕ.. glamour ಎಂಬ .. ಗಂಧ ವಿಲ್ಲದ ಬದುಕು...
ಕೊನೆಗೊಮ್ಮೆ ಬೆದರಿ ಬೆವರಿ ಗೋಗರೆದ.. google ಎದುರು..
ನೆಂಟರಲ್ಲದ Net ಗರಿಂದ...  ನೆಪಮಾತ್ರದ ಸಾಂತ್ವನ ...
ನಿನ್ನೆ ನಾಳೆಗಳೆರಡು ಒಂದಾಗಿ  ... ಇಂದು ಮುಂದುವರಿಯಾದಾದಗ ...
ಗುಟುಕು ನೀರಿಗೆ ಪರಿತಪಿಸೋ... ನಡುಗಡಲ ನಾವಿಕನೀತ...!  

Saturday, August 17, 2013

Doodh Sagar: ಸೌಮ್ಯವಾದಿಯ ರುದ್ರನರ್ತನ

          ಅಗಾದತೆ  , ಬವ್ಯತೆ , ಬೀಕರ ಇವು ಪಶ್ಚಿಮ  ಘಟ್ಟಗಳ ಸಾಮಾನ್ಯ ವಿಶೇಶತೆ. ಇವಿಸ್ಟೆ  ಅಲ್ಲ ಈ  ನಿಗೂದ  ಕಾನನ ಸೃಷ್ಟಿಯಲ್ಲಿ  ಸೃಷ್ಟಿಕರ್ಥ ಇನ್ನಷ್ಟು  ಕುಂಚ ತೋಯ್ಧಿದಾನೆ.... ಅಂತಹ dynamic ವರ್ಣ ಚಿತ್ರವೇ DOODHSAGAR.

          ನೇಸರನಿನ್ನು ಹಾಜರಿ ಹಾಕದ ಇಳಿ ಮುಂಜಾನೆ, ಮಳೆ ಮಿಶ್ರಿತ ಕುಳಿರ್ಗಾಳಿ ಯಲ್ಲಿ ಹಿಪ್ಪಿ ಗಳಂತೆ ರೈಲ್ವೆ ಹಳಿಯಲಿಯಲ್ಲಿ ತಿರುಕರಂತೆ ಆ  ಸೌಮ್ಯವಾದಿಯ ದರ್ಶನಕ್ಕೆ ಹೊರಟ್ಟಿತ್ತು  ನಮ್ಮ ತಂಡ. ದಿಗಂತದೆತ್ತರದಿಂದ ದುಮ್ಮಿಕ್ಕುವ ಅಗಾದ ಜಲರಾಶಿ. ಅರ್ಭಟ ತಾಳಲಾರದೆ ಉಂಟಾದ ದಟ್ಟ ಮಂಜು, ಕಣ್ಣು ಹಾಯಿಸಿದಸ್ಟು ಕಾಣುವ ದಟ್ಟ ಅಡವಿ , ಕಾರ್ಗಲ್ಲು ನೀರು ಸರಸಕ್ಕೆ ತಲೆಧೂಗೋ ಮರಗಿಡ ಬಳ್ಳಿಯ ತಾನನ, ಗಜ ಗಾಂಬಿರ್ಯ ದಿಂದ ಘೀಲಿಡುತ್ತಾ ಸಾಗೊ ಗೂಡ್ಸ್ ರೈಲುಗಳು. ಇವೆಲ್ಲದರ ಮದ್ಯೆ ನಮ್ಮನ್ನು ಆವರಿಸಿದ  ಅವರ್ಣನೀಯ ಅದ್ಬುತ ರೋಮಾಂಚನ. "ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ, ಮಂಕುತಿಮ್ಮ "    ಎಂಬ ಉಕ್ತಿಯನ್ನು ನೆನಪಿಸಿತ್ತು. ಮಂಜಿನ  ಮಧ್ಯದಿಂದ ಹರಿಯುತಿಹ ಬೆಲ್ನೋರೆಯ ಮಾದರಿ ಜಲಸಾಗರ 'ದೋಧ್ ಸಾಗರ' ಎಂಬ ಅನ್ವರ್ಥ ನಾಮವನ್ನು ಸಾರ್ಥಕ ಗೊಳಿಸಿತ್ತು. 


         ಕರ್ನಾಟಕ-ಗೋವಾ ಗಡಿ ಬಾಗದಲ್ಲಿ ಬರುವ ಈ ಜಲಪಾತ ಮಳೆಕಾಡುಗಳಲ್ಲಿ ನಿಜವಾಗಲು ನೋಡಲೇ ಬೇಕಾದ ಸ್ಥಳ ಗಳಲ್ಲೊಂದು. ಬಾರತದ ೫ನೇ  ಅತಿ ಎತ್ತರದ ಜಲದಾರೆ ಗಳಲ್ಲೊಂದು ಎಂಬ  ಹಿರಿಮೆಗೂ  ಪಾತ್ರವಾಗಿದೆ ಇದು. ಇದರ  ಮದ್ಯೆ ನಿರ್ಮಿಸಿರುವ ರೈಲ್ವೆ  ಬ್ರಿಜ್ ನಮ್ಮ  ಇಂಜಿನಿಯರಿಂಗ್ ಕೌಶಲ್ಯಕ್ಕೆ  ಹಿಡಿದ  ಕೈಗನ್ನಡಿ. ಸದಾ  ಮೋಡಗಳಿಂದ ಅವೃತ್ತ ವಾದ  ಬೆಟ್ಟಗಳ  ತುದಿಯಿಂದ ದುಮ್ಮಿಕ್ಕುವ  ಈ  ಜಲಪಾತ ನಿಜವಾಗಲೂ ಕ್ಷೀರ ಸಾಗರವನ್ನು ನೆನಪಿಸುತ್ತದೆ. 


        ಇದು  ಎಷ್ಟು  ಇಷ್ಟ ವಾಗುತದೋ ಅಸ್ತೆ ಕಷ್ಟ  ಇಲ್ಲಿಗೆ ತೆರಳಲು ಪಡಬೇಕಾಗುತ್ತದೆ. ಇಲ್ಲಿ  ರೈಲ್ವೆ ಸಂಪರ್ಕ ಬಿಟ್ಟರೆ ಬೇರೆ ಯಾವುದೇ ಸಂಪರ್ಕಗಳಿಲ್ಲ ಹುಬ್ಬಳ್ಳಿ ಕಡೆಯಿಂದ  ಹೋದಾಗ  ಹಿಂದೆ ಸಿಗುವ ೧೪ ಕಿಮೀ ದೂರದ ಕಾಸಲ್ ರಾಕ್  ರೈಲ್ವೆ  ಸ್ಟೇಷನ್  ನಿಂದ ನಡೆಯಬೇಕಾಗುತ್ತದೆ. ಇಲ್ಲ  ನಂತರ ಸಿಗೋ ಸದರನ ಅಸ್ಟೆ  ದೂರದಲ್ಲಿರೋ ಕುಲೆಮ್ ಅನ್ನೋ ಸ್ಟೇಷನ್ ನಿಂದ  ಬರಬೇಕಾಗುತ್ತದೆ. ದೂದಸಾಗರ್  ಪಕ್ಕದಲ್ಲೇ ಅದೇ ಹೆಸರಿನ ನಿಲ್ದಾಣವಿದೆ ಆದರೆ  ಅಲ್ಲಿ  ಯಾವುದೇ ಅದಿಕೃತ ನಿಲುಗಡೆ  ಇರುವುದಿಲ್ಲ. ತಾಂತ್ರಿಕ  ಕಾರಣಗಳಿಗಾಗಿ ರೈಲ್  ಗಳು ಇಲ್ಲಿ ಕೇವಲ ೧ ನಿಮಿಷಗಳ ಕಾಲ ನಿಲುಗಡೆ ಗೊಲ್ಲುತವೆ ಆ  ಸಮಯದಲ್ಲಿ ಜಿಗಿದು ಕೊಂಡರೆ ೧೪ ಕಿಮೀ ಪಾದಸೇವೆ ಯನ್ನು ತಪ್ಪಿಸಬಹುದು. ಲಕ್ ಚೆನ್ನಾಗಿದ್ದರ ಹಿಂತಿರುಗುವಾಗ ಅಲ್ಲಿನ ಸ್ಟೇಷನ್ ಮಾಸ್ಟರ್ ಸಹಾಯದಿಂದ ಗೂಡ್ಸ್ ಗಾಡಿಯನ್ನು ಏರಬಹುದು.


  ಒಟ್ಟಿನಲ್ಲಿ ಅಗಾದ ವನರಾಶಿಯ ಮದ್ಯದಲ್ಲಿ , ಬೃಹತ್ ಜಲರಾಶಿಯ ಹಿನ್ನಲೆ ಯಲ್ಲಿ, ಕಣ್ಣು ಮುಚ್ಚಿಸೋ ಜಡಿಮಳೆಯಲ್ಲಿ , ನೀವು ನಡೆದರೂ ಓಡಿದರೊ  ಆಗದೆ  ರೈಲೆರಿದರೂ ಸದಾ  ಚಿತ್ತದಿ ಚಿತ್ರಿತ ವಾಗಿದೆ  ಆ   ಬ್ರಹ್ಮನ  ಅದ್ಬುತ  ಕುಂಚ.  ಮನಕೆ  ಮುತ್ತಿಕ್ಕುತದೆ ಕ್ರ್ಷೀರ ಸಾಗರದ ಮಂಜಿನ  ಸಿಂಚನ .