Monday, February 13, 2017

Power Cut ಗ್ಯಾಪಲ್ಲಿ


ಜಂಜಡಗಳ ಮರೆತು ಬೆಳದಿಂಗಳ ಬೆಳಕಲ್ಲಿ ತಾರೆಗಳ ಎಣಿಸಲು Whats App ಎಂಬ ದೂಮಕೇತುವೊಂದು ತಾಲೆ ತಪ್ಪಿಸಿದೆ... 

Emoji'ಸ್ ಗೋಜಲಲ್ಲಿ ಸಿಲುಕಿದ ಮನಸ್ಸೀಗ ಇರುವೆ ಮುತ್ತಿದ ಇದ್ದಿಲ ಪೊಟ್ಟಣ... 

ಚಂದನೆಯ DPಯ ಆಚೆಗಿಹುದು, ಬಯಕೆಗಳ heatಗೆ ಕರಗಿ ಸೊರಗಿದ ಬಣ್ಣವಿಲ್ಲದ ಕಾರಿಡಾರು... 

ಯೋಚಿಸಿ ಕೂತಾಗ  ದೂರದ ಬೀದಿ ದೀಪ ಘಕ್ಕನೇ ಬೆಳಗಲು... ಬೆಸ್ಕಾಂಗೆ ಧನ್ಯವಾದವಿತ್ತು, 
ಭಾವನೆಗಳ ಮೂಟೆ ಕಟ್ಟಿ... TVಯಾಳಕ್ಕಿಳಿಯಲು... ನನ್ನ ನಾ ಮರೆತೇ....       

Friday, September 16, 2016

ಸಂಬಂಧಗಳ ಪರಮಾನಂದ...!



ವಾರಾಂತ್ಯದ ಅಧಿಕ ರಜೆಗೆ ಅವರಿವರ ಪ್ರಭಾವದಿ ದೂರದ ತೀರ್ಥ ಕ್ಷೇತ್ರದ ಶೀಘ್ರ ದರ್ಶನ ಪಡೆದು ಪುನೀತನಾಗಲು ಹಪಹಪಿಸುವ ಭಕ್ತ ಪಾಮರನಿಗೆ ...    

ಸೆಳೆದಿರುವುದೇ ಎಂದಾದರೂ ಲತೆಯಾ ಸೆರಗಳ್ಳಿ ನಗುತ ಅರಳುವ ಕಾನನದ ಪುಷ್ಪ... 


ಖುಶೀಗೆ ಕಾಸೇ ಮೂಲವಯ್ಯಾ ಎಂದು ನಂಬಿದ ಭ್ರಮಾ ಜೀವಿಗೆ ಹೇಗೆ ತಾನೆ ತಿಳಿಯಲಿ... 


ಸುಮದ ಜೊತೆಗೆ ಸುಗಂಧಕ್ಕೆ ಎಡತಾಕುವ ಚಿಟ್ಟೆಗಳ ನಡುವೆ ಬೆಸೆದ ಸಂಬಂಧಗಳ ನಡುವೆ ಒಸರುವ ಆನಂದ... 

ಪರಿಧಿ ಮೀರಿ ಪಸರಿಸೋ ಪರಮಾನಂದ....!

  

Thursday, June 23, 2016

ಆದುನಿಕ ಗೀಜಗ

ನಿಂತ ಸಾಗರದ ಮದ್ಯೇ ಚಲಿಸಿದ  ಚಿಲುಮೆಯ ಅಲೆಗಳು!
ಇಳಿಸಂಜೆಯಲಿ ಇಣುಕಿದ ನೇಸರನ ಕಂಡು ಗಾನ ಗುನುಗುತಿರಲು!
ಈ ಅದ್ಬುತ ಇಳೆಯ ಸೌoದರ್ಯಾದ ಸೆರಗನ್ನು ಒಂದಿಂಚೂ ಆಸ್ವಾದಿಸಲಾರದಾದ!
ಗಾಗಲ್ಸ್ ದರಿಸಿ ಗೂಗಲ್ ಪರ್ಯಟನೆಗೆ ಹೊರಟ ಈ ಆದುನಿಕ ಗೀಜಗ...! 
  

ಬ್ಯಾಂಗಲೋರ್ ಟ್ರಾಫಿಕ್ ರಸಗವಳ



ನೀವು  ಯಾರಾದರೂ ಬೆಂಗಳೂರಿಗರನ್ನು ಬೇಟಿ ಮಾಡಿದರೆ... ಹೆಚ್ಚಿನ  ಸಂದರ್ಬಗಳಲ್ಲಿ ಮೊದಲನೇ ಮಾತು ಬೆಂಗಳೂರಿನ ಟ್ರಾಫಿಕ್ ಬಗೆಗಿನ ಸ್ತುತಿ ಗಾನ ವಾಗಿರುತದೆ... ಇಡಿ ದಿನದ ಬಳಲಿಕೆಗೆ ಬಾಡಿದ body.. ಕೇಳದ ಗಾಡಿ, ಆ  ಮಾಲಿನ್ಯ.. ಕೆಲಸದ ಒತ್ತಡ... ಜೊತೆಗೆ ನೆತ್ತಿ ಸುಡೋ ರಣಬಿಸಿಲು.... ಒಂಥರಾ ಈ ಸ್ವರ್ಗ ನಗರಿಯಾ ನರಕದ ಟ್ರೈಲರ್ ಅನುಬವ... ಅದೇನೇ ಇದ್ದರು... ಹೊಲಸಲ್ಲು ಹಲಸು ಬೆಳೆವಂತೆ... ಈ ತಾಜಾ ಟ್ರಾಫಿಕ್ ಜಾಮ್ ನಲ್ಲೂ ಒಂತರ ಮಜಾವಿರುತ್ತೆ....

C V RAMAN ನಗರದಿಂದ ಜಯನಗರದವರೆಗೂ ಹತ್ತಿರ ಹತ್ತಿರ ದಿನಕ್ಕೆ 35 KM UP & Down... ಮತ್ತೆ ಆಫೀಸ್ ಕೆಲಸದ ನಿಮಿತ್ತ  ಇನ್ನೊಂದಿಸ್ಟು ಸವಾರಿ ಮಾಡೋ ನಾನು ಈ ಟ್ರಾಫಿಕ್ ಆನಂದ ರಸಗವಳವನ್ನು ಎಲ್ಲರ ಮುಂದಿಡಬೇಕಾಗಿದೆ.

ಬೆಂಗಳೂರೀನ ರಿಂಗ್ ರೋಡಲ್ಲಿ... ಅದರಲ್ಲೂ ಬನಶಂಕರಿಯಿಂದ Tinfactory ಮದ್ಯೆ ಸಿಗೋ  BTM, Silkboard, ಮಾರತಹಳ್ಳಿ, ಟಿನ್ ಫ್ಯಾಕ್ಟರಿ ಸಿಗ್ನಲ್ ಗಳ ಅಂದ ಚೆಂದ ಬಣ್ಣಿಸಲು ನಾನೊಬ್ಬನೇ ಸಾಲದು. ಇನ್ನು ಪೀಕ್ ಹವರ್ನಲ್ಲಿ... ವೈಟ್ ಫೀಲ್ಡ್ ಇಂದ ಮೆಜೆಸ್ಟಿಕ್ ತಲುಪೋ ಮೊದಲು E-City ಇಂದ ಚೆನ್ನೈ ತಲುಪಬಹುದು... ಜೊತೆಗೆ ಗೊರಗುಂಟೆ ಪಾಳ್ಯ ಮತ್ತು ಇನ್ನಿತರ ಸಿಟಿ ಒಳಗಿನ ಸಿಗ್ನಲ್ ಗಳನ್ನು ಮರೆತರೆ ಪಾಪ ತಟ್ಟೋದು ಖಂಡಿತ...

ಆದರೂ ಸಿಗ್ನಲ್ ಬಿದ್ದಾಗ  ಸ್ತಬ್ದವಾಗೊ ಆ ಅರ್ಧ ನಿಮಿಷದ ಹಲವಾರು ಸ್ವಾರಸ್ಯಗಳ ಆಗರ. ಹಡೆಯದ ಶಿಶುವ ಹಿಡಿದು ರೂಪಾಯಿ ಬೇಡೋ ಮಹಾ ತಾಯಂದಿರು... 10 ರೂಪಾಯಿ ಕೇಳೋ ಮಾಮನವರು... 100 ರೂಪಾಯಿ  ಕೀಳೋ ಮರ್ಯಾದಸ್ತ ಪೊಲೀಸ್ ಮಾಮಂದಿರ ಜೊತೆಗೆ ಥರಗುಟ್ಟಿಸೊ ಬಾಸುಗಳ ಅರಚಾಟ, ಆಟೋ ಟ್ಯಾಕ್ಸಿ ಡ್ರೈವರ್ ಗಳ ಸಂಸ್ಕೃತ ಪ್ರವಚನ, ಹೆಲ್ಮೆಟ್ ಮಗ್ಗುಲಿಗೇ ಮುತ್ತಿಡೋ ಪ್ರಿಯತಮೆಯರು... ಇವೆಲ್ಲವನ್ನ ಬೆರಗು ಕಣ್ಣಲ್ಲಿ ನೋಡಿ ಆನಂದಿಸೋ ನಮ್ಮಂತಹ ಚಿಂತೆ ಇಲ್ಲದ ಸಂತರು.... ಒಟ್ಟಿನಲ್ಲಿ ಇದು ನಿಜಕ್ಕೊ ಒಂಥರ ಕೆಸರಲ್ಲಿ ಕಮಲ ಕಂಡಂತೆ.  

ಏನೇ ಆಗಲಿ... ನನ್ನಂತವರಿಗೆ ತಲೆ  ಬುಡ ಇಲ್ಲದ ಯೋಚನೆ  ಮಾಡೋಕ್ಕೆ...  ಇಂತಹ ಡಬ್ಬಾ  ಲೇಖನಕ್ಕೆ ಲೇಖನಿ ಹಿಡಿಯಲು  ಒಂದು  ಉತ್ತಮ ವಿಷಯವಾಗಿದು ಮಾತ್ರ ಅರೆ ನಗ್ನ ಸತ್ಯ. ಭವ್ಯ ಬೆಂಗಳೂರಿನ  ಟ್ರಾಫಿಕ್  ಮಾತ್ರ ನಿಮ್ಮ ಸಮಯವನ್ನು ಕಸಿಯೋದಲ್ಲ... ಅದರ ಬಗೆಗಿನ ಇಂತಹ ಬರಹಗಳು ಕೂಡ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಗೊಳಿಸುತಿರೋದು ಮಾತ್ರ ಕುಚೋದ್ಯವೇ   ಸರಿ.  So stop here... take a shortcut.. n avoid SIGNAL... 

Monday, March 14, 2016

Orange Enterprises lengthy Advt jingle....

ಮ್ಮ  ಕನಸಿನ ಕೂಸು ಆರೆಂಜ್ ಎಂಟರ್ಪ್ರೈಸಸ್ ನ ಕುಕ್ಕೆ ಸುಬ್ರಹ್ಮಣ್ಯದ ಆಫೀಸ್ ನ ಪ್ರಾರಂಬೋಸ್ತವದ ಜಾಹಿರಾತಿಗೆ ಲೇಖನಿ ಹಿಡಿದಾಗ....

''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''
ಅಬ್ಬಾ.... ಭರದಿಂದ ಬೆಳೆದ ನಗರಗಳ ಬವಣೆಗಳು ಹೇಳ ತೀರದಾಗಿದೆ... 
ಹೆಚ್ಚುತಿರುವ ಹೊಗೆಯ ಕಾರ್ಮೋಡ ದಿನೇ ದಿನೇ ದಿಗಿಲುಗೊಲಿಸುತಿದೆ... 
ಏರುತಿರುವ ತಾಪಮಾನದ ತಾಪತ್ರಯಗಳು ಥರಗುಟ್ಟಿಸುತಿವೆ... 
ವಿದ್ಯುತ್ತಿನ ಕ್ಷಾಮ ನಮ್ಮೆಲ್ಲರ ಕ್ಷೇಮವನ್ನೇ  ಕಿತ್ತು ತಿನ್ನುತಿದೆ... 
ಏರುತಿರುವ ಪ್ರಕೃತಿ ವಿಕೋಪಗಳು ಮನುಕುಲವ ವಿನಾಶಕ್ಕೆ ದೂಡುತಿವೆ... 
 ಆದರೇ ಇದಕ್ಕೆಲ್ಲಾ ಪರಿಹಾರ.....???

ಇದೆ ರಶ್ಮಿ... ಸೂರ್ಯರಶ್ಮಿ... !!!

ಸೌರ ಶಕ್ತಿ... ಬವಿಷ್ಯದ ಶಕ್ತಿ... 

ಮಾತ್ರವಲ್ಲ ನಮ್ಮೆಲ್ಲರ ಬವಿಷ್ಯ ಕೂಡ.... !

ನಾವು ನಿಜವಾಗಲು ಅದೃಷ್ಟವಂತರು.... ಇನ್ನೂ ಅಳಿದುಳಿದ ಕಾಡಂಚಿನ ಸೆರಗಿನಲ್ಲಿ ಕಂಗೊಳಿಸುತಿರುವ ಹಸುಗೂಸುಗಳು ನಾವು... 
ಎಚ್ಚರಿಕೆ ಈ ಹಸಿರು ಉಳಿದರಸ್ಟೇ ನಮ್ಮ ಉಸಿರಿಗೊಂದು ಬೆಲೆ... 

ಆರೆಂಜ್ ಎಂಟರ್ಪ್ರೈಸಸ್.... ಗ್ರಾಮೀಣ ಬಾಗದಲ್ಲೊಂದು ಬೆಳಕಿನ ಆಶಾಕಿರಣ...!

ಜಗತ್ತಿನ ಅತ್ಯುತ್ತಮ ಸೋಲಾರ್ ತಂತ್ರ ಜ್ಞಾನವನ್ನು  ಜನಸಾಮನ್ಯನ ಮನೆ ಬಾಗಿಲಿಗೆ ಒಯ್ಯುತಿರುವ    ಆರೆಂಜ್ ಎಂಟರ್ಪ್ರೈಸಸ್   ಅದ್ಬುತ ಜನ ಮನ್ನಣೆಯ ಜೊತೆಗೆ... ತನ್ನ ಉತ್ಕ್ರುಷ್ಟ  ಉತ್ಪನ್ನ  ಮತ್ತು ಸೇವೆಯ ಮೂಲಕ ಪ್ರಕರವಾಗಿ ಕಂಗೊಲಿಸುತಿದೆ.... 
ಹಸಿರ ಸೇರಗಲೊಂದು ಬೆಳಕಿನ ಕ್ರಾಂತಿಗೆ ಮುನ್ನುಡಿ ಬರೆದಿದೆ.... 

ಸೌರದೀಪ... ಸೌರ ಉತ್ಪನ್ನ... ವಾಟರ್ ಹೀಟರ್ ಗಳ ಜೊತೆಗೆ... ಜಾಗತಿಕ ಗುಣಮಟ್ಟದ  ಯುಪಿಎಸ್/ ಇನ್ವರ್ಟರ್ ಗಳ ವಿಶಾಲ ಶ್ರೇಣಿ ಒಂದೇ ಸೂರಿನಡಿಯಲ್ಲಿ... 

ಉತ್ಕ್ರುಷ್ಟ   ಗುಣಮಟ್ಟದ ಸೋಲಾರ್ ಪಂಪ್ ಸೆಟ್ ಮೂಲಕ ರೈತಾಪಿ ಬಂದುಗಳ ಕಣ್ಮಣಿಯಾದ  ಆರೆಂಜ್ ಎಂಟರ್ಪ್ರೈಸಸ್... ಇದೀಗ home automation ಮೂಲಕ smart ಮನೆಗಳಲ್ಲಿ ಸ್ಮಾರ್ಟ್ ಮನಗಳನ್ನೂ ಅರಳಿಸುತ...... CC ಕ್ಯಾಮೆರಾಗಳ ಅದ್ಬುತ ಬಂಡಾರದೊಂದಿಗೆ ಸರ್ವರ ಕಣ್ಣಿನೊಳಗೊಂದು ಕಣ್ಣಾಗಿದೆ....    

ನಿಮ್ಮದೇ ಆದ ಆರೆಂಜ್ ಎಂಟರ್ಪ್ರೈಸಸ್ ಇದೀಗ ಸುಬ್ರಹ್ಮಣ್ಯದಲ್ಲಿ... 

ಬಸ್ ನಿಲ್ದಾಣದ ಹತ್ತಿರ... ಪೋಸ್ಟ್ ಆಫೀಸ್ ಎದುರುಗಡೆ... ಆರೆಂಜ್ ಎಂಟರ್ಪ್ರೈಸಸ್.  '


''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''

Saturday, December 26, 2015

ಇಪ್ಪತೈದರ ಇರುವೇ ಕಡಿತ



ವತ್ತು ತಡ ರಾತ್ರಿ ಅದ್ಯಾವುದೊ ಬುಕ್ ಓದ್ತ  ಕುಂತಿದ್ದೆ. Whatsapp ನ ಅನಾಮಿಕ ನಂಬರೊಂದು ನನ್ನ ಹುಟ್ಟುಹಬ್ಬದ ಶುಬಾಶಯ ಹೊತ್ತು ತಂದಿತ್ತು. ತಡವಾಗಿದ್ದಕ್ಕೆ ಕ್ಷಮೆ ಕೋರಿಕೆಯು ಜೊತೆಗಿತ್ತು. ನನ್ನ ಬರ್ತ್ ಡೇ ಕಳೆದು ಅದಾಗಲೇ ಎರಡು ದಿನವಾಗಿತ್ತು. ಸಮಯ ದಂಡಿ ಯಗಿದ್ದುದರಿಂದ... ಓದ್ತಾ ಇದ್ದ Mario Puzo ನ The Godfather ಬದಿಗಿಟ್ಟು ಹಂಗೇ ಯೋಚನಾ ಸಂತೆಗೆ ಜಾರಿದೆ.

ಅದು ನನ್ನ ಇಪ್ಪತೈದನೇ ವರ್ಷದ ಜನುಮ ದಿನವಾಗಿತ್ತು. ಎರಡು ಮೂರು ವರ್ಷ ಗಳ ಹಿಂದೆ ಕಾಲೇಜ್ ಜೀವನದಲ್ಲಿ ಕನಸಿನಂತೆ ಕಳೆಗಟ್ಟು ತಿದ್ದ ಈ ದಿನಾ ಇಪ್ಪತೈದನೆ ವರ್ಷಕ್ಕೆ ಬನದಾಗ ಸಪ್ಪೆ ಸಪ್ಪೆಯಾಗಿ ಫ್ಲೈಟ್ ಲ್ಲಿ ಸಿಗೋ onboard ಟೀ ಅಂತಾಗಿತ್ತು. ಹಿಂದೆ ಸುಳ್ಯ ದಲ್ಲಿದ್ದಾಗ ಹಿಂಡು ಸ್ನೇಹಿತರ ದಂಡಿನೊಡನೆ ಉನ್ಮಾದರಾಗಿ  ಆಚರಿಸುತ್ತಿದ್ದ ಬರ್ತ್ ಡೇ  ಈ ಸಾರಿ ಚೆನ್ನೈ ನ ಹೊರವಲಯದ ಫ್ಯಾಕ್ಟರಿ ಒಂದರಲ್ಲಿ  ಕಸ್ಟಮರ್ ಆಫೀಸ್ ನಲ್ಲಿ ಆತನನ್ನು ಸಂಬಾಲಿಸೋದರಲ್ಲಿ ಕಳೆದೊಗಿತ್ತು. ಇಡಿ ದಿನದ ಎಡೆ ಬಿಡದ ಕಾರ್ಯ ಮುಗಿಸಿ ಟ್ಯಾಕ್ಸಿ ಏರಿ ಮೊಬೈಲ್ ನೋಡಿದಾಗ  ಎಲ್ಲರ ತರಹೇವಾರಿ ಶುಭಾಶಯ ನೋಡಿ ಒಳಗೊಳಗೇ ನಸು ನಕ್ಕಿದ್ದೆ. ಇದು ನನ್ನ ಕಥೆ ಮಾತ್ರವಲ್ಲ... ರಜತ ಮಹೋತ್ಸವ ಆಚರಿಸುತಿರುವ ಎಲ್ಲ ಹುಡುಗರ... ಬಹುಶ ಯುವಕರ ಮಾತ್ರ ಕಥೆಯಿದು. 

ನಮ್ಮ ಓರಗೆಯ ಕೆಲವು ಹುಡುಗಿರೆಲ್ಲಾ ಒಂದು ಹಡೆದು ಇನ್ನೊಂದರ ನಿರೀಕ್ಷೆಯಲ್ಲಿದ್ದರೆ ಹಲವರು ಕತ್ತು ಬಾಗಿಸಿ ಗಂಟು ಹಾಕಿಸಿಕೊಳ್ಲೊ ತವಕದಿ ತೇಲ್ತಾ ಇದ್ದಾರೆ. ನಾವು ಮಾತ್ರ ಇರೋ ಕಡೆ ಇರುವೆ ಕಡಿತ ಅಂತ ಇರದ ಸ್ವರ್ಗ ಅರಸೋ ಅಬ್ಬೇಪಾರಿಗಳು. ಅಂಬೇಗಾಲಿಡೋ ಇಂಜಿನಿಯರ್ಗಳಾದ ನಾವು ದುಡ್ಡಿರೋ ದೊಡ್ಡಪ್ಪಗಳಿಗೆ ಕಮ್ಮಿ ದುಡಿಯೋರಾದ್ರೆ... ಕಮ್ಮಿ ಇರೋ ಚಿಕ್ಕಪ್ಪಾನವರಿಗೆ ಜಾಸ್ತಿ ದುಡಿಮೆಯೋರು. ಕುಟುಂಬ ವರ್ಗಕಂತೂ ಸರ್ಕಾರಿ ಕೆಲಸಕ್ಕೆ ಸೇರದ ನತದೃಸ್ಟರು ನಾವು.  ಕಾಲೇಜು ಹುಡುಗಿರೆಲ್ಲ ನಮ್ಮಲ್ಲಿ ಸಹೋದರತೆಯನ್ನು ಕಂಡರೆ... ಪ್ರೈಮರಿ, highschool ಮಕ್ಕಳಿಗೆಲ್ಲ ನಾವು ಅಂಕಲ್ ಗಲಾಗಿದ್ದೇವೆ. ಈಗ ತಾನೇ ಸಂಸಾರದ ಕೆಸರಲ್ಲಿ ಸಿಳುಕಿರೋ ಸ್ನೇಹಿತರಿಗೆ ನಾವು ಸುಖ ಪುರುಷರಂತೆ ಕಂಡುಬಂದರೆ ... 35-45 ಗಳಿಗೆ ನಾವೇನು ಅರಿಯದ ಹುಡುಗರು. 50ರ ಮೇಲಿನವರಿಗೆ  ನಾವಿನ್ನು ಮಕ್ಕಳು.

ಅಬ್ಬರದ ಕನಸಿನ ದಿಬ್ಬಣ ದೊಂದಿಗೆ ಕಾಲೇಜ್ ಇಂದ ಹೊರಬಂದ ನಮಗೆ ವಾಸ್ತವ ಬಹಳ ಬೇಗ ಅರ್ಥ ವಾಗತೊಡಗಿದೆ. ನಮ್ಮ ಚರ್ಚೆಗಳಲ್ಲೀಗ ಕ್ರೀಡೆ , ಸಿನಿಮಾ, ಹುಡುಗಿ, ಬೆಡಗಿನಾಚೆ ಸಾಮಾಜಿಕ ಚಿಂತನೆಗಳು ಜಾಗ ಪಡೆದಿವೆ. ಅರ್ನಬ್ ಗೊಸಾಮಿಯ news hour ಕೂಡ ಇಷ್ಟ ವಾಗತೊಡಗಿದೆ... ಕಾಸು ಕೂಡಿದೋ ಗಂಬೀರ ಯೋಚನೆ ಬಂದರೂ ಕುಡಿಕೆ ಮಾತ್ರ ಖಾಲಿಯಾಗೆ ಉಳಿದಿದೆ. ಸ್ವಂತ ಉದ್ಯಮದ ಕನಸುಗಳು ಗರಿಗೆದರಿ ಪ್ರಯತ್ನಕ್ಕೂ ದೂಡುತಿವೆ. ಕೆಲವೊಂದು ಜವಾಬ್ದಾರಿ ಗಳು ಬೇಡ ಬೇಡವೆಂದರೂ ಹೆಗಲೆರುತಿವೆ. ಆಫೀಸ್ ಕಾರ್ಯಗಳು ನಮ್ಮನ್ನು ಅಗತ್ಯಕಿಂತ ಜಾಸ್ತಿ ಮಾಗಿಸುತಿವೆ. ಬಹುಶ ಮೆದುಳು ತನ್ನ RAM ನ್ನು ಗರಿಷ್ಟ ಮಟ್ಟದಲ್ಲಿ ಉಪಯೋಗಿಸತೊಡಗಿದೆ   ಅಂತ ಅನಿಸತೊಡಗಿದೆ. 

ಅದಾಗ್ಯೂ ಜಗತ್ತಿನಲಿ ಒಬ್ಬ ವ್ಯಕ್ತಿಗೆ ಸ್ವಾತಂತ್ರ್ಯ... ಅದರಲ್ಲೂ ಆರ್ಥಿಕ ಸ್ವಾವಲಂಬನೆ ನೀಡೋ ಸಂತೋಷ ಬಹುಶ ಬೇರೆ ಯಾವುದೇ ಅರ್ಥದಲ್ಲಿ ಸಿಗಲಾರದೇನೋ. study days ಲ್ಲಿ ಬಿದಿಕಾಸಿಗೂ ಮನೆಯಲ್ಲಿ ಅಂಗಲಾಚುತಿದ್ದ ನಮಗೇ ಸ್ವಂತ ದುಡಿಮೆ ಕೈ ಬಿಸಿಯೇರಿಸ ತೊಡಗಿದಾಗ ಪಂಜರವಿಲ್ಲದ ಜಂಗಮರಾದೆವು ನಾವು. ಆ ಗೋಲ್ಡನ್ ಡೇಸ್ ಇವತ್ತಿರದಿರಬಹುದು... ಆದರೇ ಹೆಚ್ಚಿನವರೆಲ್ಲ ಬೆಂಗಳೂರಲ್ಲೇ  ಇರೋದ್ರಿಂದ.. ವೀಕೆಂಡ್ಸ್ ಸೇರೋ ಕೂಡು ಕೂಟಗಳು.. ಬೈಕ್ ರೈಡ್ ಗಳು.. ಜೊತೆ ಸೇರಿಸೋ ಟ್ರಿಪ್ ಗಳು.. ಎಲ್ಲರೂ ಸೇರೋ ಇತರೆ ಸಂದರ್ಬಗಳಲ್ಲಿ  ನಿಜ ವಾಗ್ಳು ಆ ದಿನಗಳನ್ನು ಮೆಲೈಸುತದೆ. ಜೊತೆಗೆ ವಾಟ್ಸಪ್, ಫೇಸ್ಬುಕ್ ಗಳು ಎಂದೆಂದಿಗೂ ಎಲ್ಲರನ್ನು ಜೋತೆಯಾಗಿರಿಸಿವೆ. 

ಕನಸೆಂಬ  ಕುದುರೆ  ಏರಿ ಸ್ವರ್ಗ ಸದೃಶ ಊರಿಂದ ನರಕದಂತ ನಗರಕ್ಕೆ ಸೇರೊ ನಾವು... ಅಲ್ಲೂ ಸ್ವರ್ಗವಾಸಿಗಳು. ಉತ್ಕಟ ಸ್ವಾತಂತ್ರ್ಯ... ಗೆಳೆಯರ  ಬಳಗ... ಉದ್ಯೋಗ... ಸಂಪರ್ಕ... ಸವಲತ್ತು... ಹೀಗೆ ಬಯಸಿದ ಬಹಳಷ್ಟು ದೊರೆತಿರುವಾಗ... ಬಹುಶ  ನಮ್ಮ ಜೀವನದ  ಸುಂದರ ದಿನಗಳ ಉಚ್ರಾಯ ಸ್ತಿತಿ ಇರಬಹುದೇನೋ ಅಂದುಕೊಳ್ಳುತಲೇ.... ಯೋಚನಾ ಲಹರಿಯಿಂದ ಹೊರಬಂದು ಅದನ್ನು ಅಕ್ಷರ ರೂಪಕಿಳಿಸಿದಾಗ ಮದ್ಯ ರಾತ್ರಿ 2:30 ಆಗಿತ್ತು. ಇದು ನನ್ನೊಬ್ಬನ ಕಥೆ ಯಾಗಿರದೇ 25ರ  ಆಸುಪಾಸಿನ ನಮ್ಮೆಲ್ಲರ ಕಥೆ-ವ್ಯಥೆ ಯಾಗಿತ್ತು.   

Monday, October 19, 2015

ಫೇಸ್ಬುಕ್ ಎಂಬ ಬಚ್ಚಲಲ್ಲಿ ಬೆತ್ತಲಾಗುತ್ತ....!

ಗತ್ತನ್ನು ಹಿಡಿಯಾಗಿಸಿದ ತಂತ್ರಾಂಶಗಳ ಸಾಲಲ್ಲಿ ಮೊದಲ ಪಂಕ್ತಿ ಸಾಮಾಜಿಕ ಜಾಲ ತಾಣಗಳದ್ದು . ಅವರೊಳಗಿನ ಸಾಮ್ರಟನೆ ಈ ಫೇಸ್ಬುಕ್ ... ತರ್ಜುಮೆ ಗೊಂಡ ಮುಖ ಪುಸ್ತಕ. ಅರ್ಥಾತ್...  ಆದುನಿಕ ಜಾತಕ... ಸ್ನೇಹಿತರ ತಾಣ.. ನಮ್ಮನ್ನ ನಾವು ಮಾರಿಕೋಳ್ಳೊ ಮಾರುಕಟ್ಟೆ.. ವೇದನೆ ನಿವೇದನೆಗಳೀಗೊಂದು ವೇದಿಕೆ.. ಇನ್ನು ಏನೇನೋ.. ಒಟ್ಟಿನಲ್ಲಿ ಇದಿಲ್ಲದ ಬದುಕಿನ ಕಲ್ಪನೇನೆ ಒಂದು ಊಹಿಸಲಸಾದ್ಯ ನಿರ್ವಾತ. 


ಹಂಗಂತ ನಾನೇನು ಹುಟ್ಟುತ್ತಲೇ ಪ್ರೊಫೈಲ್ ಕ್ರಿಯೇಟ್ ಮಾಡ್ಕೊಂಡು ಬಿದ್ದವನಲ್ಲ . ಪೀಯುಸೀ ನಲ್ಲಿ ನೋಟ್ ಬುಕ್ ಹಿಡೀವಾಗ್ಲು ಫೇಸ್ಬುಕ್ ನಂಗೆ ಪರಿಚಯವಿಲ್ಲದ ಅಪರಿಚಿತ. ಕಾಲೇಜ್ಗೆ ಅಡಿಯಿಡುತಿದ್ದಂತೆ  ಹೊಸ ಹುಡುಗೀರ ಜೋತೆಗೆ ನಮ್ಮನ್ನು ತೀರಾ ಸೆಳೆದ ಇನ್ನೊಂದು ವಿಷಯವೆಂದರೆ ಇಂತಹ ಸೋಶಿಯಲ್ ನೆಟ್ವರ್ಕ್ಸ್.  ನಮ್ಮಲ್ಲಿ ಹಲವು ಜನರ ಡೆಬ್ಯೂ ಆಗಿದ್ದು ಆರ್ಕುಟಲ್ಲಿ... ಅದೂ ಹ್ರಿತಿಕ್ ರೋಶನ್ ಪ್ರೊಫೈಲ್ ಪಿಕ್ ಮೂಲಕವೆ. VGA  ಕ್ಯಾಮೆರಾದಲ್ಲಿ ತೆಗಿತಿದ್ದ ನಮ್ಮ ಫೋಟೋಗಳು ನಮ್ಗೆ ನೋಡೋಕಾಗ್ತಿರ್ಲಿಲ್ಲ. ಹಾಗಾಗಿ ಲಾಬ ಹೃತಿಕ್ ಗೆ (ಸೆಲ್ಫಿ ಜಮಾನದಲ್ಲಿ ನಮ್ಮ ಪ್ರೊಫೈಲ್ ನೋಡಿದ್ರೆ ಸ್ವತಃ ಬಾಲಿವುಡ್ ಮಂದಿಯೇ ಬೆರಗಾಗ್ತಾರೆ ಬಿಡಿ).   ಕೆಲವೇ ದಿನಗಳಲ್ಲಿ ಸುನಾಮಿಯಂತೆ ಬಂದೆರಗಿದ ಜುಕರ್ ಬರ್ಗ್ ನ ಫೇಸ್ಬುಕ್ ಎಂಬ ಬ್ರಹ್ಮಾಸ್ತ್ರ ಆರ್ಕುಟ್ ನ ಬುಡವನ್ನೇ ಅಲ್ಲಾಡಿಸಿ ಬಿಡ್ತು. ಕಳೆದ ವರ್ಷ ಆರ್ಕುಟ್ ತನ್ನ ಬಾಗಿಲು ಮುಚ್ಚಿದಾಗ ನಮ್ಮ ಪುರಾತನ ಫೋಟೋ ಗಳನ್ನು ನೋಡುತ್ತಾ ಕಾಲ ಹಿಂದೆ ಸರಿದಂತಾಗಿ ಬಾವುಕ ಶ್ರದ್ದಾಂಜಲಿ ಅರ್ಪಿಸಿದೆವು. ಆ ಮೂಲಕ ಫೇಸ್ಬುಕ್ ಗೆ ಕಂಪ್ಲೀಟ್ ಶರಣಾದೆವು. 

ಇವತ್ತಂತೂ ಫೇಸ್ಬುಕ್  ನಮ್ಮ ಜೀವನದ ಅವಿಬಾಜ್ಯ ಭಾಗವಾಗಿದೆ. ಯಾರೂ ಮೂಸದ ನಮ್ಮ ಕತೆ, ಕವಿತೆ, ಪ್ರತಿಬೆ ಗಳಿಗೆ ಪುಕ್ಕಟೆ ವೇದಿಕೆ ಯಾದರೆ... ತೆರೆಮರೆಯ ಸಾಹಸವ ಜಗಕ್ಕೆ ತಿಳಿಸುವ ಡಿಜಿಟಲ್ ಹೋರ್ಡಿಂಗ್ ಇದು. ಆಫೀಸ್ಗೆ ಬಂದ  ಹೊಸ ಹುಡುಗಿಯ ಇತಿಹಾಸ ತಿಳಿಯಲು ಇದು ಕೈಪಿಡಿ ಯಾದರೆ ಮದುವೆ ಪ್ರೊಪೋಸಲ್ ತರೋ ಹುಡುಗನ ಜನ್ಮ ಕುಂಡಲಿ ಇದು. ಕ್ಯಾಮೆರಾ ಹಿಡಿದ ಮಂಗಗಳನೆಲ್ಲ ಛಾಯಾಗ್ರಹಕ ರನ್ನಾಗಿಸಿದರೆ...  ಗಾಗಲ್ ದರಿಸಿದ ದರಿದ್ರರನ್ನೆಲ್ಲ ಸ್ಟಾರ್ ಮಾಡಿದ ಮಾಯಾವಿ ಜಾಲವಿದು. ಎಲ್ಲವನ್ನೂ... ಎಲ್ಲರನ್ನೂ... ತೆರೆದಿಡುತ್ತಾ ಉಟ್ಟ ಬಟ್ಟೆಯಲ್ಲೇ ಬೆತ್ತಲಾಗಿಸಿದ  ಅಗೋಚರ  ಬಚ್ಚಲು ಮನೆಯಿದು. 

ಅದಾಗ್ಯೂ ಯುವ ಜನತೆಯ ನರ ನಾಡಿಯಾಗಿರುವ ಈ ಸಾಮಾಜಿಕ ತಾಣ ಗಳು ಈ ಶತಮಾನ ದಲಿ ಸಾಮಾನ್ಯನಿಗೆ ಸಿಕ್ಕ ಬಹುದೊಡ್ಡ ಅಸ್ತ್ರ ಎಂಬುದರಲ್ಲಿ ಎರಡು ಮಾತಿಲ್ಲ . ತನ್ನ ಮೂಗಿನ ನೇರಕ್ಕೆ ಯೋಚಿಸಿ ಸೊಂಟದ ಕೆಳಕ್ಕೆ ಕಾರ್ಯ ನಿರ್ವಹಿಸೋ ಸಾಂಪ್ರದಾಯಿಕ ಮೀಡಿಯಾಕ್ಕೆ ಟಾಂಗ್ ಕೊಡಬಹುದಾದ ಆಮ್ ಆದ್ಮಿ ಮಾದ್ಯಮ ಇದು.   ಆಳೋ ದೊರೆಗಳಿಗೆ ಜನ ಮಾನಸದ ಸಿಟ್ಟು ಸೆಡವು ಗಳನ್ನು ತಲುಪಿಸೋ ಸಾದನ ಇದು. ವ್ಯವಸ್ತೆ ಯೆಡೆಗೆ ಜನಸಾಮಾನ್ಯ ನಿಗಿರೋ ರೇಜಿಗೆ ಯನ್ನ ದಾಖಲಿಸೋ ಪಲಕವಿದು. 
ಕವಿಯೊಬ್ಬ ತನ್ನ ಕವಿತೆ ಬರೆದರೇ .. ಕಂಪನಿಯೊಂದು ತನ್ನ ಸರಕನ್ನಿಟ್ಟಿರುತ್ತೆ  ಇಲ್ಲಿ. ನಾಯಕ ನೊಬ್ಬ ತನ್ನ ಕನಸನ್ನ ಹಂಚಿದರೆ .. ಸಂಘಟನೆ ಯೊಂದು ತನ್ನ ಸಿದ್ದಾಂತವನ್ನ ಹರಿಯಬಿಡುತ್ತದೆ. 

ಯಾರೂ.. ಯಾವುದಕ್ಕೂ.. ಯಾವಾಗಲೂ ಬಳಸಬಹುದಾದ ನವ ಮದ್ಯಮವೇ ಈ ನಮ್ಮ ಫೇಸ್ಬುಕ್. ಯಾರೇ ಆದರೂ ಇದರ ಧನಾತ್ಮಕ ಅಂಶಗಳನ್ನು ಮಾತ್ರ ಪರಿಗಣಿಸಿ ಉಪಯೋಗಿಸಿರೆಂದು ಮನದುಂಬಿ ಆಶಿಸುತ್ತಾ... ಈ ಲೇಖನದ ಸ್ನ್ಯಾಪ್ ತೆಗ್ದು ಫೇಸ್ಬುಕ್ ಗೆ ಪೋಸ್ಟ್ ಮಾಡಿ ಲೈಕ್ ಪಡೆಯೋ ಕಾತರದಿ... ಈ ಅಗೋಚರ ಬಚ್ಚಲಲ್ಲಿ ನಾನೂ ಅರಿಯದೇ ಬೆತ್ತಲಾದೆ...!
   ಇಂತಿ... 
ರೋಶನ್ ಚಾರ್ಮತ